ಬೈಂದೂರು: ಭಾರತ್ ಬಂದ್ ಬೆಂಬಲಿಸಿ ಪ್ರತಿಭಟನೆ

ಬೈಂದೂರು: ಕೃಷಿ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿ ರೈತ ಸಂಘಟನೆಯ ನೇತೃತ್ವದಲ್ಲಿ ವಿವಿಧ ಸಂಘಟನೆಗಳು ಇಂದು ಕರೆಕೊಟ್ಟಿರುವ ಭಾರತ್ ಬಂದ್ ಅನ್ನು ಬೆಂಬಲಿಸಿ ಬೈಂದೂರಿನ ಅಂಡರ್ ಪಾಸ್ ಬಳಿ ಸಂಯುಕ್ತ ಹೋರಾಟ ಸಮಿತಿ ವತಿಯಿಂದ ಪ್ರತಿಭಟನೆ ನಡೆಯಿತು.

ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುರೇಶ್ ಕಲ್ಲಾಗರ, ಕಳೆದ 10 ತಿಂಗಳಿನಿಂದ ದೆಹಲಿಯಲ್ಲಿ ರೈತರು ಪ್ರತಿಭಟಿಸುತ್ತಿದ್ದರೂ ಕೇಂದ್ರ ಸರಕಾರ ಮಾತ್ರ ಕಾಟಾಚಾರಕ್ಕಾಗಿ ರೈತ ಸಂಘಟನೆಗಳನ್ನು ಮಾತುಕತೆಗೆ ಆಹ್ವಾನಿಸುತ್ತದೆ. ಕೇಂದ್ರ ಸರಕಾರ ಹೋರಾಟವನ್ನು ದಾರಿತಪ್ಪಿಸಲು ಪ್ರಯತ್ನಿಸಿ ಹತ್ತಿಕ್ಕಲು, ಅಪಪ್ರಚಾರಗಳನ್ನೂ ಹಲವಾರು ಹಲವು ಬಾರಿ ನಡೆಸಿಯೂ ವಿಫಲವಾಗಿದೆ. ಅನ್ನದಾತರು ನಡೆಸುತ್ತಿರುವ ಹೋರಾಟ ರೈತರ ಬಗ್ಗೆ ಮಾತ್ರವಲ್ಲ, ಅವರ ಹೋರಾಟ ದೇಶದ ಪ್ರತಿಯೊಬ್ಬ ಪ್ರಜೆಯ ಆಹಾರ ಹಕ್ಕಿನ ಭದ್ರತೆಗಾಗಿ ನಡೆಯುತ್ತಿರುವ ಹೋರಾಟವಾಗಿದೆ ಎಂದರು.

ಮೂರು ಕ್ರಷಿ ಕಾಯ್ದೆಗಳ ತಿದ್ದುಮಾಡಿ ಅದರ ಪೂರಕವಾದ ಭೂಮಸೂದೆ ತಿದ್ದುಪಡಿ, ವಿದ್ಯುತ್ ಕಾಯ್ದೆ ತಿದ್ದುಪಡಿ ದೇಶದ ಜನರನ್ನು ಲೂಟಿ ಮಾಡಲು ಬಂಡವಾಳಗಾರರಿಗೆ ಸೂಪರ್ ಲಾಭ ತಂದುಕೊಟ್ಟು ಬಿಜೆಪಿ ಪಕ್ಷವನ್ನು ಆರ್ಥಿಕವಾಗಿ ಗಟ್ಟಿಗೊಳಿಸಲು ಮಾಡುವ ತಂತ್ರವಾಗಿದೆ ಎಂದು ಅವರು ದೂರಿದರು.
ಕ್ರಷಿಕೂಲಿಕಾರರ ಸಂಘಟನೆ ಜಿಲ್ಲಾಧ್ಯಕ್ಷ ವೆಂಕಟೇಶ ಕೋಣಿ ಪ್ರಾಸ್ತಾವಿಕವಿಗಿ ಮಾತನಾಡಿದರು.
ಕಾಂಗ್ರೆಸ್ ಮುಖಂಡರಾದ ಮದನ್ ಕುಮಾರ್, ಪ್ರಕಾಶ್ಚಂದ್ರ ಶೆಟ್ಟಿ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದರು.

ಡಿಎಸ್ಎಸ್ ಮುಖಂಡರಾದ ದಯಾನಂದ, ಜೆಡಿಎಸ್ ಪಕ್ಷದ ಸಂದೇಶ್ ಭಟ್,ಪಡುಕೋಣೆ ವ್ಯವಸಹಾಯ ಸಂಘದ ಅಧ್ಯಕ್ಷರು,ಕಾರ್ಮಿಕ ಮುಖಂಡರಾದ ರಾಜೀವ ಪಡುಕೋಣೆ, ಕೃಷಿಕೂಲಿಕಾರ ಸಂಘದ ನಾಗರತ್ನ ನಾಡ, ಡಿವೈಎಫ್ಐ ಮುಖಂಡ ವಿಜಯ್, ಜನವಾದಿ ಮಹಿಳ ಸಂಘಟನೆಯ ಶೀಲಾವತಿ,ಕಟ್ಟಡ ಕಾರ್ಮಿಕರ ಸಂಘಟನೆಯ ಕಾರ್ಯದರ್ಶಿ ಗಣೇಶ ತೊಂಡೆಮಕ್ಕಿ, ಸಿಐಟಿಯು ತಾಲೂಕು ಸಂಚಾಲಕರಾದ ರೊನಾಲ್ಡ್ ರಾಜೇಶ್ ಕ್ವಾಡ್ರಸ್ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.