ಅಶೋಕನಗರ (ಮಧ್ಯಪ್ರದೇಶ): ಪ್ರಸ್ತುತ ಒಂದು ಕೆಜಿ ಟೊಮೆಟೊ 150ರಿಂದ 200ರವರೆಗೆ ಮಾರಾಟವಾಗುತ್ತಿದೆ. ಇದರಿಂದ ಗ್ರಾಹಕರು ಜೇಬಿಗೆ ಕತ್ತರಿ ಬಿದ್ದಂತಾಗಿದೆ. ಆದರೆ ಈಗ ಮಾರುಕಟ್ಟೆಗೆ ಟೊಮೆಟೊ ಆವಕ ಇಳಿಕೆ ಕಂಡಿದೆ. ಆಹಾರ ದೈತ್ಯ ಮೆಕ್ಡೊನಾಲ್ಡ್ ತನ್ನ ಮೆನುವಿನಿಂದ ಟೊಮೆಟೊ ಅನ್ನು ಕೈಬಿಟ್ಟಿದೆ ಎಂಬುದರ ಕುರಿತು ವರದಿಯಾಗಿದೆ.ಮಾರುಕಟ್ಟೆಯಲ್ಲಿ ತರಕಾರಿ ಬೆಲೆ ಗಗನಮುಖಿಯಾಗಿದೆ. ಟೊಮೆಟೊ ಬೆಲೆಯಂತೂ ತುಂಬಾ ಏರಿಕೆಯಾಗಿದೆ.ಮಧ್ಯಪ್ರದೇಶದ ಅಶೋಕನಗರದ ಮೊಬೈಲ್ ಅಂಗಡಿಯವರೊಬ್ಬರು ಸ್ಮಾರ್ಟ್ಫೋನ್ ಖರೀದಿಸಿದರೆ, ಎರಡು ಕೆಜಿ ಟೊಮೆಟೊವನ್ನು ಉಚಿತವಾಗಿ ನೀಡುತ್ತಿದ್ದಾರೆ.
ಹಬ್ಬ ಹರಿದಿನಗಳಲ್ಲಿ ಗ್ರಾಹಕರನ್ನು ಸೆಳೆಯಲು ವಿಶೇಷ ರಿಯಾಯಿತಿ ನೀಡಲಾಗುತ್ತದೆ. ಆದರೆ, ಕೆಲವು ವ್ಯಾಪಾರಿಗಳು ವಿಭಿನ್ನವಾಗಿ ಯೋಚಿಸುತ್ತಾರೆ. ಗ್ರಾಹಕರ ಗಮನ ಸೆಳೆದು ತಮ್ಮ ಮಾರಾಟವನ್ನು ಹೆಚ್ಚಿಸಲು ಹೊಸ ಯೋಜನೆಗಳನ್ನು ಪ್ರಾರಂಭಿಸುತ್ತಾರೆ. ಪ್ರಸ್ತುತ ಮೊಬೈಲ್ ಅಂಗಡಿಯವರಲ್ಲಿ ಭಾರಿ ಪೈಪೋಟಿ ನಡೆಯುತ್ತಿತ್ತು. ಇದರ ಹಿನ್ನೆಲೆಯಲ್ಲಿ ಮೊಬೈಲ್ ಅಂಗಡಿಕಾರರು ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಲು ಹೊಸ ಯೋಜನೆಗಳನ್ನು ಪರಿಚಯಿಸಿದ್ದಾರೆ. ಮಧ್ಯಪ್ರದೇಶದ ಅಶೋಕ್ ನಗರದ ಮೊಬೈಲ್ ಶೋರೂಮ್ನಲ್ಲಿ ಇಂತಹ ಒಂದು ವಿಶೇಷ ಘಟನೆಯೊಂದು ವರದಿಯಾಗಿದೆ. ಹೌದು, ಸ್ಮಾರ್ಟ್ಫೋನ್ ಖರೀದಿಸುವ ಗ್ರಾಹಕರಿಗೆ 2 ಕೆಜಿ ಟೊಮೆಟೊ ಉಚಿತವಾಗಿ ನೀಡಲಾಗುತ್ತಿದೆ.
ಟೊಮೆಟೊ ಬಲು ದುಬಾರಿ: ಪೆಟ್ರೋಲ್ ಬೆಲೆಗಿಂತಲೂ ಟೊಮೆಟೊ ಬಲು ದುಬಾರಿ ಆಗಿದೆ. ಮಾರುಕಟ್ಟೆಗಳಲ್ಲಿ ಲಭ್ಯವಾಗುವ ಎಲ್ಲ ತರಕಾರಿಗಳಲ್ಲೇ ಟೊಮೆಟೊ ಬೆಲೆ ತುಂಬಾ ಏರಿಕೆ ಕಂಡಿದೆ. ಮೇ ತಿಂಗಳ ಆರಂಭದ ಅವಧಿಯಲ್ಲಿ 15 ರೂ. ಇದ್ದ ಟೊಮೆಟೊ ಸದ್ಯ 150ರಿಂದ 200 ರೂ.ವರೆಗೆ ಇದೆ. ಪ್ರಸ್ತುತ ಟೊಮೆಟೊ ಲಭ್ಯತೆ ಕೊರತೆ ಇರುವುದರಿಂದ ದೆಹಲಿ ಸೇರಿದಂತೆ ವಿವಿಧ ರಾಜ್ಯಗಳ ಮೆಕ್ಡೊನಾಲ್ಡ್ ಕೇಂದ್ರದಲ್ಲಿ ಟೊಮೆಟೊವನ್ನು ತಮ್ಮ ತಿನಿಸುಗಳಿಗೆ ಬಳಕೆ ಮಾಡಲಾಗುತ್ತಿಲ್ಲ. ಇದರಿಂದ ಗ್ರಾಹಕರು ಸಹಕರಿಸಬೇಕು ಎಂದು ಮೆಕ್ಡೊನಾಲ್ಡ್ ಕೇಂದ್ರಗಳು ತಿಳಿಸಿವೆ.
ಇದರಿಂದಾಗಿ ಹೆಚ್ಚು ಮೊಬೈಲ್ ಮಾರಾಟ ಮಾಡುತ್ತಿದ್ದು, ಅದೇ ಸಮಯದಲ್ಲಿ ಟೊಮೆಟೊ ಉಚಿತವಾಗಿ ನೀಡುವುದರಿಂದ ಗ್ರಾಹಕರೂ ಖುಷಿಯಾಗಿದ್ದಾರೆ. ಮಳೆಗಾಲದಲ್ಲಿ ಟೊಮೆಟೊ ಬೆಳೆ ನಾಶವಾಗಿದೆ. ಇಂದೋರ್ನಿಂದ ಅಶೋಕನಗರಕ್ಕೆ ಸಾರಿಗೆ ದರ ಹೆಚ್ಚಿದೆ. ಇದರ ಬೆನ್ನಲ್ಲೆ ಟೊಮೆಟೊ ದರ ಕೆಜಿಗೆ 120ರಿಂದ 160 ರೂ.ಗೆ ಏರಿಕೆಯಾಗಿದೆ ಎನ್ನುತ್ತಾರೆ ಗ್ರಾಹಕ ಕೃಷ್ಣ.
ಇದನ್ನೆಲ್ಲ ಪರಿಗಣಿಸಿ ಮೊಬೈಲ್ ಅಂಗಡಿಯವ ಅಭಿಷೇಕ್ ಅಗರ್ವಾಲ್ ತಮ್ಮ ಗ್ರಾಹಕರಿಗಾಗಿ ವಿಶೇಷ ಯೋಜನೆಯೊಂದನ್ನು ನೀಡಿದ್ದಾರೆ. ಸ್ಮಾರ್ಟ್ಫೋನ್ ಖರೀದಿಸುವಾಗ 2 ಕೆಜಿ ಟೊಮ್ಯಾಟೊ ಉಡುಗೊರೆಯಾಗಿ ನೀಡಲಾಗುತ್ತಿದೆ. ಈ ಯೋಜನೆ ಜಾರಿಯಾದ ಕೂಡಲೇ ಗ್ರಾಹಕರ ಸಂಖ್ಯೆ ಹೆಚ್ಚುತ್ತಿದೆ ಎನ್ನುತ್ತಾರೆ ಅಂಗಡಿಯವರು ಅಭಿಪ್ರಾಯ.