ಮಂಗಳೂರು: ಪ್ರಖ್ಯಾತ ಉದ್ಯಮಿ ಬಿ. ಆರ್ ಶೆಟ್ಟಿ ಮರಳಿ ಕರ್ಮಭೂಮಿಗೆ ತೆರಳಿದ್ದಾರೆ. ಬುಧ್ವಾರದಂದು ಯುಎಇಗೆ ಮರಳಿ ಆಗಮಿಸಿದ್ದು, ಕರ್ನಾಟಕ ಸಂಘ ದುಬೈ ತಂಡವು ಅವರನ್ನು ಆತ್ಮೀಯವಾಗಿ ಸ್ವಾಗತಿಸಿದೆ.
ತುಳುನಾಡಿನ ಉಡುಪಿ ಜಿಲ್ಲೆಯಿಂದ ಯುಎಇಗೆ ಬಂದು ಯಶಸ್ವಿ ಉದ್ಯಮಿಯಾಗಿ ಸಾವಿರಾರು ಅನಿವಾಸಿ ಕನ್ನಡಿಗರಿಗೆ ಉದ್ಯೋಗವಕಾಶ ಕಲ್ಪಿಸಿದ್ದ ಬಿ.ಆರ್ ಶೆಟ್ಟಿಯವರು ಅಬುಧಾಬಿ ಸರ್ಕಾರ ಸೌಹಾರ್ದತೆಯ ಪ್ರತೀಕವಾಗಿ ನೀಡಿದ ಜಾಗದಲ್ಲಿ ಭವ್ಯ ಹಿಂದೂ ಮಂದಿರ ರಚನೆಯ ಸಮಿತಿಯ ಮುಖ್ಯಸ್ಥರಾಗಿ ಮಂದಿರ ಶಿಲಾನ್ಯಾಸ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು.
ಇದೀಗ ಮಂದಿರ ಉದ್ಘಾಟನೆ ಸಂದರ್ಭದಲ್ಲೇ ಅವರು ಮರಳಿ ತನ್ನ ಕರ್ಮಭೂಮಿ ಯುಎಇಗೆ ಮರಳಿದ್ದು, ಬಿ.ಆರ್ ಶೆಟ್ಟಿ ಮತ್ತು ಅವರ ಧರ್ಮಪತ್ನಿ ಡಾ. ಚಂದ್ರಕುಮಾರಿ ಶೆಟ್ಟಿಯವರನ್ನು ಕರ್ನಾಟಕ ಸಂಘ ದುಬೈ ಅಧ್ಯಕ್ಷರಾದ ಶಶಿಧರ ನಾಗರಾಜಪ್ಪ ಉಪಾಧ್ಯಕ್ಷ ದಯಾ ಕಿರೋಡಿಯನ್ ಸ್ವಾಗತಿಸಿದರು.
ಕರ್ನಾಟಕ ಸಂಘ ದುಬೈ ಪದಾಧಿಕಾರಿಗಳಾದ, ಮನೋಹರ ಹೆಗ್ಡೆ , ಮಲ್ಲಿಕಾರ್ಜುನ್ ಗೌಡ, ನಾಗರಾಜ್ ರಾವ್ ಉಪಸ್ಥಿತರಿದ್ದರು.