ಬಸ್-ಕಾರು ಅಪಘಾತ: ಕಾರ್ಕಳದ ಉದ್ಯಮಿ ಸಾವು

ಉಡುಪಿ: ಕಾರ್ಕಳ-ಉಡುಪಿ ರಸ್ತೆಯ ಗುಡ್ಡೆಯಂಗಡಿಯಲ್ಲಿ ಬಸ್ ಮತ್ತು ಕಾರು ಮುಖಾಮಖಿ ಡಿಕ್ಕಿಯಾದ ಪರಿಣಾಮ ಕಾರ್ಕಳದ ಉದ್ಯಮಿ ಸ್ಥಳದಲ್ಲೆ ಮೃತಪಟ್ಟ ಘಟನೆ ಸೋಮವಾರ ಸಂಭವಿಸಿದೆ.
ಕಾರ್ಕಳದ ಅಯ್ಯಪ್ಪ ನಗರದ ನಿವಾಸಿ ಕೆ.ಕೃಷ್ಣ ಪೈ (62) ಮೃತಪಟ್ಟವರು. ಅವರು ತಮ್ಮ ಕಾರಿನಲ್ಲಿ ಮಣಿಪಾಲಕ್ಕೆ ತೆರಾಳುತ್ತಿದ್ದ ವೇಳೆ ಹಿರಿಯಡ್ಕ ಗುಡ್ಡೆಂಗಡಿಯ ಸೂರಜ್ ಇಂಡಸ್ಟ್ರೀಸ್ ಬಳಿ ಉಡುಪಿಯಿಂದ ಕಾರ್ಕಳಕ್ಕೆ ಹೋಗುತ್ತಿದ್ದ ಖಾಸಗಿ ಬಸ್ ವಿಶಾಲ್‌ಗೆ ಡಿಕ್ಕಿ ಹೊಡೆದಿದೆ.
ಡಿಕ್ಕಿ ಹೊಡೆದ ರಭಸಕ್ಕೆ ಕೆ.ಕೃಷ್ಣ ಪೈ ಸ್ಥಳದಲ್ಲೆ ಮೃತ ಪಟ್ಟಿದ್ದಾರೆ. ಕಾರು ಸಂಪೂರ್ಣ ನಜ್ಜುಗುಜ್ಜು ಆಗಿದೆ.
ಅಲ್ಲದೇ ಬಸ್ ಮತ್ತು ಕಾರಿನ ನಡುವೆ ಸಿಲುಕಿಕೊಂಡ ಪೈ ಅವರ ಮೃತ ದೇಹ ಹೊರ ತೆಗೆಯಲು ಅರ್ಧ ಗಂಟೆ ತಗಲಿದೆಯೆಂದು ಪೊಲೀಸರು ತಿಳಿಸಿದ್ದಾರೆ. ಹಿರಿಯಡ್ಕ ಠಾಣೆಯಲ್ಲಿ ದೂರು ದಾಖಲಾಗಿದೆ.