ಉಡುಪಿ: ಆಗುಂಬೆ ಘಾಟಿಯ ನಾಲ್ಕನೇ ತಿರುವಿನಲ್ಲಿ ಖಾಸಗಿ ಬಸ್ಸೊಂದು ಎರಡು ಗಂಟೆಗಳಿಗೂ ಹೆಚ್ಚು ಕಾಲ ಕೆಟ್ಟು ನಿಂತ ಪರಿಣಾಮ ಘಾಟಿಯಲ್ಲಿ ಸಂಚಾರ ವ್ಯತ್ಯಯವಾಗಿದೆ. ಸೆ.10 ರಾತ್ರಿ ಸುಮಾರು 7.30 ರ ಹೊತ್ತಿಗೆ ಉಡುಪಿ-ಶಿವಮೊಗ್ಗ ಎಕ್ಸ್ ಪ್ರೆಸ್ ಬಸ್ಸೊಂದು ಕೆಟ್ಟು ನಿಂತಿದೆ.
ನಡು ರಸ್ತೆಯಲ್ಲೇ ಬಸ್ಸು ನಿಂತಿದ್ದರಿಂದ ಇತರ ವಾಹನಗಳು ಮುಂದಕ್ಕೆ ಹೋಗಲು ಸಾಧ್ಯವಾಗಲಿಲ್ಲ.ಇದರಿಂದ ಸಂಚಾರ ವ್ಯತ್ಯಯವಾಗಿದ್ದು ನೂರಾರು ಪ್ರಯಾಣಿಕರು ತೊಂದರೆ ಅನುಭವಿಸಿದರು.ರಾತ್ರಿ 9.30 ರ ವರೆಗೂ ಬಸ್ಸು ರಸ್ತೆ ಮಧ್ಯದಲ್ಲಿ ನಿಂತಿತ್ತು.ಕೊನೆಗೆ ಆಗುಂಬೆ ಘಾಟಿಯಲ್ಲಿ ಸಂಚಾರ ಸುಗಮವಾಗಿಸುವ ಕೆಲಸವನ್ನು ಪೊಲೀಸ್ ಸಿಬಂಧಿಗಳು ನಿರ್ವಹಿಸಿದರು.












