ಕರ್ನಾಟಕ: ಭಾರೀ ಮಳೆಗೆ ಬೆಂಗಳೂರಿನ ವಿದ್ಯಾರಾಯನಪುರದಲ್ಲಿ ಹಳೆ ಕಟ್ಟಡ ಒಂದು ಕುಸಿದಿದ್ದು, ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ವರದಿಯಾಗಿದೆ.
ಬೆಂಗಳೂರಿನಲ್ಲಿ ಭಾನುವಾರ ಆಲಿಕಲ್ಲು ಸಹಿತ ಭಾರಿ ಮಳೆಯಾಗಿದ್ದು, ನಗರದ ಹಲವೆಡೆ ನೀರು ತುಂಬಿದ್ದು, ಜನಜೀವನ ಅಸ್ತವ್ಯಸ್ಥವಾಗಿದೆ. ಹಲವೆಡೆ ಮರಗಳು ಉರುಳಿದ್ದು, ಕೆ.ಆರ್ ಸರ್ಕಲ್ ಪ್ರದೇಶದಲ್ಲಿ ನೀರು ತುಂಬಿ ಜನರು ಅಂಡರ್ ಪಾಸ್ ಬಳಿ ಪರದಾಡುವಂತಾಗಿದ್ದು, ಬಳಿಕ ಅವರನ್ನು ಸುರಕ್ಷಿತ ಸ್ಥಳಕ್ಕೆ ಕರೆದೊಯ್ಯಲಾಯಿತು.
ಈ ಬಾರಿ ಮುಂಗಾರು ಮಳೆಯು ಜೂನ್ 4 ರಂದು ಕೇರಳ ಪ್ರವೇಶಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.