ಉಡುಪಿ: ಅಸೋಸಿಯೇಶನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಎಂಜಿನಿಯರ್ಸ್ ಆ್ಯಂಡ್ ಆರ್ಕಿಟೆಕ್ಟ್ಸ್ ಮತ್ತು ಬೆಂಗಳೂರಿನ ಯು.ಎಸ್ ಕಮ್ಯೂನಿಕೇಶನ್ಸ್ ವತಿಯಿಂದ ಎಂಜಿಎಂ ಕಾಲೇಜು ಮೈದಾನದಲ್ಲಿ ‘ಬಿಲ್ಡ್ ಟೆಕ್-2024’ ಕಟ್ಟಡ ಸಾಮಗ್ರಿಗಳ ವಸ್ತು ಪ್ರದರ್ಶನಕ್ಕೆ ಶುಕ್ರವಾರ ಚಾಲನೆ ದೊರಕಿದ್ದು, ಫೆ. 25ರ ವರೆಗೆ ನಡೆಯಲಿದೆ.
ವಿವಿಧ ಕಂಪೆನಿಗಳ ಬಾಗಿಲುಗಳು, ಕಿಟಕಿಗಳು, ಬಾತ್‌ರೂಂ ಫಿಟ್ಟಿಂಗ್, ಗ್ಲಾಸ್ ಆ್ಯಂಡ್ ಗ್ಲಾಸ್ ಫಿಟ್ಟಿಂಗ್, ಟೈಲ್ ಗಳು, ಸ್ಯಾಾನಿಟರಿ ಆ್ಯಂಡ್ ಪ್ಲಂಬಿಂಗ್, ಸ್ವಿಚ್ಚು ಗಳು, ಎಲೆಕ್ಟ್ರಿಕಲ್ ಫಿಟ್ಟಿಂಗ್, ಕನ್‌ಸ್ಟ್ರಕ್ಷನ್ ಟೆಕ್ನಾಲಜೀಸ್, ಸೋಲಾರ್ ಉತ್ಪನ್ನಗಳು, ಫ್ಲೋರಿಂಗ್ ಮತ್ತು ರೂಫಿಂಗ್‌ಗೆ ಸಂಬಂಧಿಸಿದ ಉತ್ಪನ್ನಗಳು, ಪೈಂಟ್ ಗಳು ಹಾಗೂ ವಾಟರ್ ಪ್ರೂಫ್ ಕೆಮಿಕಲ್, ಸ್ಟೀಲ್, ಸಿಮೆಂಟ್, ಫ್ಲೈವುಡ್, ಸೇಫ್ಟಿ ಮತ್ತು ಮೆಷಿನರಿ ಇಕ್ವಿಪ್‌ಮೆಂಟ್, ಎಲಿವೇಟರ್‌ಗೆ ಸಂಬಂಧಿಸಿದ ಕಂಪೆನಿಗಳು, ಇಂಟಿರೀಯರ್ ಸಲುವಾಗಿ ವಿವಿಧ ಸೋಫಾ, ಡೈನಿಂಗ್ ಟೇಬಲ್, ಕಿಚನ್ ಸೆಟ್‌ಗಳ ಮಳಿಗೆಗಳು ತೆರೆಯಲ್ಪಟ್ಟಿದ್ದು, ಗ್ರಾಾಹಕರಿಗೆ ವೈವಿಧ್ಯಮಯ ಕಂಪೆನಿಗಳ ವಿವಿಧ ವಿನ್ಯಾಾಸದ ಕಟ್ಟಡ ಸಾಮಗ್ರಿಗಳ ಬಗ್ಗೆ ಸ್ಥೂಲವಾದ ಮಾಹಿತಿ ಒದಗಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.