ಭಟ್ಕಳ: ಫೆ. 11ರಂದು ಬ್ರೌನ್ ವುಡ್ ಫರ್ನಿಚರ್ ಮಳಿಗೆ ಶುಭಾರಂಭ

ಭಟ್ಕಳ: ಜಿಲ್ಲೆಯ ಮನೆಮಾತಾಗಿರುವ ಪೀಠೋಪಕರಣ ಮಳಿಗೆ ಬ್ರೌನ್ ವುಡ್ ಫರ್ನಿಚರ್ ನ ನೂತನ ಮಳಿಗೆಯು ಭಟ್ಕಳ ಕೆ.ಎಸ್.ಆರ್.ಟಿ.ಸಿ ಬಸ್ ಸ್ಟ್ಯಾಂಡ್ ಹತ್ತಿರ ಇರುವ ಎಸ್.ಆರ್.ಎಸ್ ಶಾಪಿಂಗ್ ಕಾಂಪ್ಲೆಕ್ಸಿನ ಮೊದಲನೆ ಮಹಡಿಯಲ್ಲಿ ಫೆ. 11ರಂದು ಬೆಳಿಗ್ಗೆ 10 ಗಂಟೆಗೆ ಉದ್ಘಾಟನೆಗೊಳ್ಳಲಿದೆ.

ಮಳಿಗೆಯನ್ನು ಭಟ್ಕಳ ನಾಗಯಕ್ಷಿ ದೇವಸ್ಥಾನದ ಧರ್ಮದರ್ಶಿ ರಾಮದಾಸ ಪ್ರಭು ಉದ್ಘಾಟಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಕೆನರಾ ಬ್ಯಾಂಕಿನ ರೀಜನಲ್ ಆಫೀಸ್ ಡಿಜಿಎಂ ಶೀಬಾ ಸಹಜನ್, ನಾಮಧಾರಿ ಸಮಾಜ ಸಂಘದ ಅಧ್ಯಕ್ಷ ಅರುಣ ನಾಯ್ಕ, ಭಟ್ಕಳ ತಾಲೂಕು ಆಸ್ಪತ್ರೆ ಮುಖ್ಯ ವೈದ್ಯಾಧಿಕಾರಿ ಡಾ. ಸವಿತಾ ಕಾಮತ್, ಮಜ್ಲಿಸ್-ಇ-ಇಸ್ಲಾ ತಂಜೀಂ ಅಧ್ಯಕ್ಷ ಇನಾಯುತುಲ್ಲಾ ಶಾಬಾಂದ್ರಿ, ಸ್ಪಂದನ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷ ಶಿವಾನಂದ ನಾಯ್ಕ, ಉಡುಪಿ ಕೆನರಾ ಬ್ಯಾಂಕ್ ಸೀನಿಯರ್ ಮ್ಯಾನೇಜರ್ ಜಯಂತ್ ಅಡಿಗ, ಮುರ್ಡೇಶ್ವರ ನೇತ್ರಾಣಿ ಅಡ್ವೆಂಚರ್ ಮಾಲೀಕ ಗಣೇಶ್ ಹರಿಕಾಂತ, ಭಾರತೀಯ ಸೇನೆ ನಿವೃತ್ತ ಯೋಧ ಗಂಅಪತಿ ಎಂ, ಎಸ್.ಆರ್.ಎಸ್ ಶಾಪಿಂಗ್ ಕಾಂಪ್ಲೆಕ್ಸ್ ನ ಮಾಲೀಕ ವಿಠ್ಠಲ ನಾಯ್ಕ ಭಾಗವಿಸಲಿದ್ದಾರೆ.