ಬೆಂಗಳೂರು: ದೇವರ ಪ್ರಸಾದ ರೂಪದಲ್ಲಿ ಮಾದಕ ವಸ್ತು ಬ್ರೌನ್ ಶುಗರ್ ಸಾಗಣೆ ಮಾಡುತ್ತಿದ್ದ ಆರೋಪಿಯನ್ನು ಸಿಟಿ ಮಾರ್ಕೆಟ್ ಪೊಲೀಸರು ಇಂದು ಬಂಧಿಸಿದ್ದಾರೆ.
ಗಿರಿನಗರದ ನಿವಾಸಿ ವಿಕ್ರಮ್ ಖಿಲೇರಿ (25) ಬಂಧಿತ ಆರೋಪಿ. ಈತ ಪಟ್ನೂಲ್ ಪೇಟೆಯಲ್ಲಿ ಡ್ರಗ್ಸ್ ಮಾರಾಟ ಮಾಡುತ್ತಿದ್ದ. ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಿದ ಪೊಲೀಸರು ಆತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತನಿಂದ 90 ಗ್ರಾಂ ಬ್ರೌನ್ ಶುಗರ್, ಮೊಬೈಲ್, ಬೈಕ್ ಜಪ್ತಿ ಮಾಡಲಾಗಿದೆ ಎಂದು ತಿಳಿದುಬಂದಿದೆ.
ಡ್ರಗ್ಸ್ ಪೊಟ್ಟಣದಲ್ಲಿ ತುಂಬುತ್ತಿದ್ದ ಆರೋಪಿ, ಅದರ ಮೇಲೆ ದೇವರ ಭಾವಚಿತ್ರ ಅಂಟಿಸುತ್ತಿದ್ದ. ದೇವರ ಪ್ರಸಾದವೆಂದು ಹೇಳಿ ಬಸ್ ಹಾಗೂ ವಿವಿಧ ಕಂಪನಿಗಳ ಮೂಲಕ ಕೋರಿಯರ್ನಲ್ಲಿ ಡ್ರಗ್ಸ್ ಸಾಗಿಸುತ್ತಿದ್ದ ಎಂದು ತನಿಖೆಯಿಂದ ತಿಳಿದುಬಂದಿದೆ.












