ಬ್ರಹ್ಮಾವರ : “ಕ್ರೀಡೆಗಳಿಂದ ಕೇವಲ ಮನೋರಂಜನೆ ಮಾತ್ರ ದೊರೆಯಲಾರದು ,ಅವುಗಳಿಂದ ದೈಹಿಕ ಶಕ್ತಿ, ಮಾನಸಿಕ ಶಾಂತಿ ,ವೃದ್ಧಿಯಾಗುವುದು” ಎಂಬ ಉದ್ದೇಶದೊಂದಿಗೆ ವಿದ್ಯಾ ಲಕ್ಷ್ಮೀ ಸಮೂಹ ಶಿಕ್ಷಣ ಸಂಸ್ಥೆ ಬ್ರಹ್ಮಾವರ ಇಲ್ಲಿನ ವಾರ್ಷಿಕ ಕ್ರೀಡೋತ್ಸವ ಬ್ರಹ್ಮಾವರದ ಸರಕಾರಿ ಬೋರ್ಡ್ ಹೈಸ್ಕೂಲ್ ಮೈದಾನದಲ್ಲಿ ಜರುಗಿತು.
ಕ್ರೀಡೋತ್ಸವಕ್ಕೆ ಅತಿಥಿಗಳಾಗಿ ಶ್ರೀ ಮೊಹಮ್ಮದ್ ಆಸಿಫ್ ಜನರಲ್ ಮ್ಯಾನೇಜರ್ ಟವೆಲ್ ಪ್ರಾಜೆಕ್ಟ್ಕಕಂಪೆನಿ ಮಸ್ಕತ್, ಶ್ರೀಮತಿ ಫಾಝಿಯ ಹಾಗೂ ಬಿ ಟಿ ನಾಯಕ್ ನಿವೃತ್ತ ಉಪಪ್ರಾಂಶುಪಾಲರು ಸರಕಾರಿ ಬೋರ್ಡ್ ಹೈಸ್ಕೂಲ್ ಬ್ರಹ್ಮಾವರ, ಉಪ ಪ್ರಾಂಶುಪಾಲರು ಶ್ರೀಮತಿ ಉಮಾ ಹಾಗೂ ದೈಹಿಕ ಶಿಕ್ಷಕಿ ಶ್ರೀಮತಿ ಜಯಲಕ್ಷ್ಮಿ ಉಪಸ್ಥಿತರಿದ್ದರು. ವಿದ್ಯಾಲಕ್ಷ್ಮೀ ಸಮೂಹ ಶಿಕ್ಷಣ ಸಂಸ್ಥೆ ಬ್ರಹ್ಮಾವರ ಇಲ್ಲಿನ ಸಂಸ್ಥಾಪಕರಾದ ಶ್ರೀ ಸುಬ್ರಹ್ಮಣ್ಯ ಹಾಗೂ ನಿರ್ದೇಶಕಿಯಾದ ಶೀಮತಿ ಮಮತಾ ವಿದ್ಯಾರ್ಥಿಗಳಿಗೆ ಹಿತನುಡಿಗಳನ್ನು ನೀಡಿದರು.ಪ್ರಾಂಶುಪಾಲರಾದ ಡಾ.ಸೀಮಾ ಜಿ ಭಟ್ ಹಾಗೂ ಕ್ರೀಡಾ ಸಂಯೋಜಕರಾದ ಶ್ರೀ ನಿತಿನ್ ಶೆಣೈ ಮತ್ತು ಶ್ರೀ ಮನೋಜ್ ಕುಮಾರ್ , ಹಾಗೂ ಉಪನ್ಯಾಸಕರ ವೃಂದ ಮತ್ತು ವಿದ್ಯಾರ್ಥಿ ವೃಂದದವರು ಉಪಸ್ಥಿತರಿದ್ದರು. ವಾಣಿಜ್ಯ ವಿಭಾಗದ ಉಪನ್ಯಾಸಕಿ ಕುಮಾರಿ ಅಕ್ಷಯ ಸ್ವಾಗತಿಸಿದರೆ, ಕನ್ನಡ ವಿಭಾಗದ ಮುಖ್ಯಸ್ಥರಾದ ಶ್ರೀಮತಿ ಅನುಪಮ ಭಟ್ ವಂದಿಸಿದರು, ವಾಣಿಜ್ಯ ವಿಭಾಗದ ಉಪನ್ಯಾಸಕಿ ಕುಮಾರಿ ಸ್ವಾತಿ ಕಾರ್ಯಕ್ರಮವನ್ನು ನಿರೂಪಿಸಿದರು.