ಬ್ರಹ್ಮಾವರ: ಪದ್ಮಾವತಿ ಎಂ. ಶೆಟ್ಟಿಗಾರ್ ನಿಧನ

ಬ್ರಹ್ಮಾವರ: ಯಕ್ಷಗಾನ ಕಸೆಸೀರೆ ನೆಯ್ಗೆಗೆ ರಾಷ್ಟ್ರ ಪ್ರಶಸ್ತಿ ಪಡೆದಿದ್ದ ದಿ. ಬಿ.ಮಂಜುನಾಥ ಶೆಟ್ಟಿಗಾರ್ ಅವರ ಧರ್ಮಪತ್ನಿ ಪದ್ಮಾವತಿ ಎಂ.ಶೆಟ್ಟಿಗಾರ್ (86) ಅವರು ಅಸೌಖ್ಯದಿಂದ ಮಂಗಳವಾರ ಮುಂಜಾನೆ ಬ್ರಹ್ಮಾವರ ಇಂದಿರಾನಗರದ ತಮ್ಮಸ್ವಗೃಹದಲ್ಲಿ ನಿಧನರಾದರು.

ಅವರು ಹಿರಿಯ ಪತ್ರಕರ್ತ ಬಿ.ಬಿ.‌ ಶೆಟ್ಟಿಗಾರ್ ಸಹಿತ ನಾಲ್ವರು ಪುತ್ರರು, ಮೂವರು ಪುತ್ರಿಯರು ಹಾಗೂ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.