ಬ್ರಹ್ಮಾವರ: ಮೀನು ತುಂಬಿಕೊಂಡು ಸಾಗುತ್ತಿದ್ದ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಘಟನೆ ಬ್ರಹ್ಮಾವರ ಹೇರೂರಿನ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಇಂದು ಸಂಜೆ ಸಂಭವಿಸಿದೆ.
ಲಾರಿ ಬಿದ್ದ ರಭಸಕ್ಕೆ ಲಾರಿಯೊಳಗಿದ್ದ ಮೀನುಗಳು ರಸ್ತೆಗೆ ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ. ಮೀನಿನ ಬಾಕ್ಸ್ ಗಳು ಕೂಡ ಅಲ್ಲಾಲ್ಲಿ ಬಿದ್ದುಕೊಂಡಿದೆ. ಲಾರಿ ಮುಂಭಾಗ ಜಖಂಗೊಂಡಿದ್ದು, ಚಾಲಕನಿಗೆ ಗಾಯವಾಗಿದೆ ಎಂದು ತಿಳಿದುಬಂದಿದೆ.












