ಬ್ರಹ್ಮಾವರ: ರಾಜ್ಯ ಪದವಿ ಪೂರ್ವ ಶಿಕ್ಷಣ ಇಲಾಖೆ ಯ ವತಿಯಿಂದ ನೆಡೆದ ರಾಜ್ಯಮಟ್ಟದ ಖೋ ಖೋ ಪಂದ್ಯಾಟದಲ್ಲಿ ಉಡುಪಿ ಜಿಲ್ಲೆ ಯನ್ನು ಪ್ರತಿನಿಧಿಸಿ, ತಂಡ ಅತ್ಯುತ್ತಮ ನಿರ್ವಹಣೆ ಪ್ರದರ್ಶಿಸಿ ಸೆಮಿಫೈನಲ್ ಪ್ರವೇಶದಲ್ಲಿ ರೋಚಕ ಸೋಲು ಅನುಭವಿಸಿದರು, ಸರ್ವಾಂಗೀಣ ಆಟದ ಪ್ರದರ್ಶನ ನೀಡಿದ SMS ಪದವಿಪೂರ್ವ ಕಾಲೇಜು ಬ್ರಹ್ಮಾವರ ವಿದ್ಯಾರ್ಥಿನಿ ನಿಧಿ ಪೂಜಾರಿ ಬೆಸ್ಟ್ ಡಿಫೆಂಡರ್ ಪ್ರಶಸ್ತಿ ಯೊಂದಿಗೆ ರಾಷ್ಟ್ರಮಟ್ಟದಲ್ಲಿ ಕರ್ನಾಟಕವನ್ನು ಪ್ರತಿನಿಧಿಸಲಿದ್ದಾಳೆ. ಇವಳ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು ಮತ್ತು ಬೋಧಕ ವರ್ಗ, ಶಿಕ್ಷಕರಕ್ಷಕ ಸಮಿತಿ, ಮತ್ತು ಹಳೆ ವಿದ್ಯಾರ್ಥಿ ಸಂಘ ಕ್ರೀಡಾ ಸಾಧಕಿಗೆ ಅಭಿನಂದನೆಯನ್ನು ಸಲ್ಲಿಸುತ್ತದೆ.

















