ಜಿಲ್ಲಾ ಮಟ್ಟದ ವಿಜ್ಞಾನ ನಾಟಕ ಸ್ಪರ್ಧೆ: ಬ್ರಹ್ಮಾವರ ಬೋರ್ಡ್ ಹೈಸ್ಕೂಲ್ ಗೆ ಪ್ರಥಮ ಸ್ಥಾನ

ಬ್ರಹ್ಮಾವರ: ಸಾರ್ವಜನಿಕ ಶಿಕ್ಷಣ ಇಲಾಖೆ ನಡೆಸಿದ ಉಡುಪಿ ಜಿಲ್ಲಾ ಮಟ್ಟದ ವಿಜ್ಞಾನ ನಾಟಕ ಸ್ಪರ್ಧೆಯಲ್ಲಿ ಸ.ಪ.ಪೂ.ಕಾಲೇಜು (ಬೋರ್ಡ್ ಹೈಸ್ಕೂಲ್) ಬ್ರಹ್ಮಾವರದ ವಿದ್ಯಾರ್ಥಿಗಳು ಅಭಿನಯಿಸಿದ, ರೋಹಿತ್ ಎಸ್ ಬೈಕಾಡಿ ನಿರ್ದೇಶನದ ‘ಸಾಂಕ್ರಾಮಿಕ ಅವಾಂತರ’ ನಾಟಕ ಪ್ರಥಮ ಸ್ಥಾನ ಪಡೆದು ವಿಭಾಗ ಮಟ್ಟಕ್ಕೆ ಆಯ್ಕೆಯಾಗಿದೆ. ಉತ್ತಮ ನಾಟಕ ರಚನೆಕಾರ ಪ್ರಶಸ್ತಿ ಶಿಕ್ಷಕ ವರದರಾಜ್ ಬಿರ್ತಿಗೆ ಲಭ್ಯವಾಗಿದೆ.
ವಿಭಾಗೀಯ ಮಟ್ಟದ ಸ್ಪರ್ಧೆ ಹಾಸನದಲ್ಲಿ ನಡೆಯಲಿದೆ.