udupixpress
Home Trending ಬ್ರಹ್ಮಶ್ರೀ ನಾರಾಯಣ ಗುರು ದೂರದೃಷ್ಟಿಯ ದಾರ್ಶನಿಕ: ಪ್ರಧಾನಿ ನರೇಂದ್ರ ಮೋದಿ

ಬ್ರಹ್ಮಶ್ರೀ ನಾರಾಯಣ ಗುರು ದೂರದೃಷ್ಟಿಯ ದಾರ್ಶನಿಕ: ಪ್ರಧಾನಿ ನರೇಂದ್ರ ಮೋದಿ

ನವದೆಹಲಿ: ಬ್ರಹ್ಮಶ್ರೀ ನಾರಾಯಣ ಗುರು ದೂರದೃಷ್ಟಿಯ ದಾರ್ಶನಿಕ. ನಾರಾಯಣ ಗುರು ಅವರ ಮುಂದೆ ನಾನು ತಲೆಬಾಗುತ್ತೇನೆ. ಅವರ ಜೀವನ, ಕಲೆಗಳು ಆಧ್ಯಾತ್ಮಿಕತೆ ಹಾಗೂ ಸಮಾಜ ಸುಧಾರಣೆಯ ಉತ್ತಮ ಮಿಶ್ರಣವಾಗಿದೆ. ಅವರು ಶಿಕ್ಷಣ ಮತ್ತು ಮಹಿಳೆಯರ ಸಬಲೀಕರಣಕ್ಕೆ ಒತ್ತು ನೀಡಿದ್ದರು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಸಮಾಜ ಸುಧಾರಕ ಬ್ರಹ್ಮಶ್ರೀ ನಾರಾಯಣ ಗುರು ಅವರ ಜನ್ಮ ದಿನಾಚರಣೆಯ ಅಂಗವಾಗಿ ಬುಧವಾರ ನಾರಾಯಣಗುರುಗಳ ಭಾವಚಿತ್ರಕ್ಕೆ ಗೌರವ ನಮನ ಸಲ್ಲಿಸಿದರು.

ಬಳಿಕ ಟ್ವೀಟ್ ಮಾಡಿರುವ ಅವರು, ಕೇರಳದಲ್ಲಿ ಜನಿಸಿದ್ದ ಶ್ರೀ ನಾರಾಯಣ ಗುರು ಅವರು, 19ನೇ ಶತಮಾನದಲ್ಲಿ ಸಾಮಾಜಿಕ ತಾರತಮ್ಯವನ್ನು ಕೊನೆಗೊಳಿಸಿ, ಜನರಲ್ಲಿ ಒಗ್ಗಟ್ಟನ್ನು ಬೆಳೆಸಲು ಹೋರಾಡಿದ್ದರು ಎಂದು ತಿಳಿಸಿದ್ದಾರೆ.

 

error: Content is protected !!