ಪೆಲತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ‘ಬ್ರಹ್ಮಕಲಶೋತ್ಸವ’

ಉಡುಪಿ ಕಾರ್ಕಳ ತಾಲೂಕಿನ ಪೆಲತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಶ್ರೀ ಮಹಾಲಿಂಗೇಶ್ವರ ಶ್ರೀ ಮಹಾಗಣಪತಿ, ಶ್ರೀ ಭದ್ರಕಾಳಿ ದೇವರಿಗೆ ಬ್ರಹ್ಮಕಲಶೋತ್ಸವವು ಮೇ 25 ರವರೆಗೆ ನಡೆಯಲ್ಲಿದ್ದು, ಆ ಪ್ರಯುಕ್ತ ದೇಗುಲದಲ್ಲಿ ಮೇ 21ರ ಬೆಳಿಗ್ಗೆ ಗಂಟೆ 8.00ರಿಂದ ಸಹಸ್ರ ಪ್ರಮೋದಕ ಗಣಪತಿ ಹೋಮ, ಅಷ್ಟ ಬಂದ, ಬಿಂಬ ಶುದ್ಧಿ, ಗಣಪತಿ ದೇವರಿಗೆ ಶಾಂತಿ ಪ್ರಾಯಶ್ಚಿತ್ತ ಹೋಮ, 108 ಕಲಶ ಸಹಿತ ಮಹಾ ಮಂತ್ರ ಹೋಮ, ಕಲಶಾಭಿಷೇಕ, ಮಹಾಪೂಜೆ ಹಾಗೂ ಮಧ್ಯಾಹ್ನ ಅನ್ನ ಸಂತರ್ಪಣೆ, ಸಂಜೆ ಗಂಟೆ 5:30 ರಿಂದ ಅಘೋರ ಹೋಮ, ಭೂವರಾಹ ಹೋಮ ಹಾಗೂ ಶ್ರೀ ದುರ್ಗಾ ನಮಸ್ಕಾರ ಪೂಜೆ‌ ಧಾರ್ಮಿಕ ಕಾರ್ಯಕ್ರಮಗಳು ವಿಧಿ ವಿಧಾನದ ಪ್ರಕಾರ ನಡೆಯಿತು.

ಹಾಗೂ ಖ್ಯಾತ ಕಲಾವಿದರಿಂದ ತಾಳಮದ್ದಳೆ, ಊರ ಭಕ್ತರಿಂದ ನೃತ್ಯ ವೈಭವ ಕಾರ್ಯಕ್ರಮ, ವಿಜಯ ಶೆಟ್ಟಿ ಮೂಡುಬೆಳ್ಳೆ ಮತ್ತು ಬಳಗ ಇವರಿಂದ ಭಕ್ತಿ ಸಂಗೀತ ರಸಮಂಜರಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು.