ಉಡುಪಿ: ವೈದ್ಯರು ಮಾಡುವ ಸೇವೆ ಉದಾತ್ತ ಸೇವೆ ಎಂದು ಜನರು ಆಲೋಚಿಸುತ್ತಾರೆ. ಬೇರೆಯವರಿಗೆ ಉಪಕಾರ ಮಾಡುವುದೇ ಉದಾತ್ತ ಸೇವೆ. ಹೆಚ್ಚಿನ ವೈದ್ಯರು ತಮ್ಮ ಕೈಲಾದ ಪ್ರಯತ್ನ ಮಾಡಿ ರೋಗಿಗಳನ್ನು ಉಳಿಸುವ ಪ್ರಯತ್ನ ಮಾಡುತ್ತಾರೆ, ಆದರೆ ಇಂದಿನ ಯುಗದಲ್ಲಿ ವೈದ್ಯರನ್ನು ತಪ್ಪಾಗಿ ಅರ್ಥೈಸಿಕೊಳ್ಳುತ್ತಾರೆ. ವೈದ್ಯರನ್ನು ಸನ್ಮಾನಿಸುವ ಈ ಸಂದರ್ಭದಲ್ಲಿ ನಮ್ಮ ಕರ್ತವ್ಯವನ್ನು ಇನ್ನೂ ಚೆನ್ನಾಗಿ ಮಾಡಬೇಕು, ಅದಕ್ಕೆ ಜನರ ಸಹಕಾರ ಬೇಕು ಎಂದು ಖ್ಯಾತ ವೈದ್ಯ ಡಾ.ಭಾಸ್ಕರಾನಂದ ಕುಮಾರ್ ಅವರು ಅಭಿಪ್ರಾಯಪಟ್ಟರು.
ವೈದ್ಯ ದಿನಾಚರಣೆಯ ಅಂಗವಾಗಿ ಬ್ರಹ್ಮಗಿರಿಯ ಬಾಲ ಭವನದಲ್ಲಿ ಲಯನ್ಸ್ ಕ್ಲಬ್ ಬ್ರಹ್ಮಗಿರಿ ಹಾಗೂ ಲಯನ್ಸ್ ಕ್ಲಬ್ ಅಂಬಲಪಾಡಿ ಫ್ರೈಡ್ ನ ಪರವಾಗಿ ಸತ್ಕಾರ ಸ್ವೀಕರಿಸಿ ಅವರು ಮಾತನಾಡಿದರು.
ಡಾ.ಉಮೇಶ್ ಪ್ರಭು ವೈದ್ಯ ದಿನಾಚರಣೆಯ ಪ್ರಾಮುಖ್ಯತೆಯನ್ನು ವಿವರಿಸಿದರು.
ಕ್ಲಬ್ಬಿನ ವತಿಯಿಂದ ಎಸ್ ಎಸ್ ಎಲ್ ಸಿ ಯಲ್ಲಿ ಉತ್ತಮ ಅಂಕಗಳನ್ನು ಪಡೆದ ಒಳಕಾಡು ಸರ್ಕಾರಿ ಶಾಲೆಯ ವಿದ್ಯಾರ್ಥಿನಿ ವಿದ್ಯಾಲಕ್ಷ್ಮಿ ಕಾಮತ್ ಅವರಿಗೆ ಧನ ಸಹಾಯವನ್ನು ಲಯನ್ ಹರಿಪ್ರಸಾದ್ ರೈ ನೀಡಿದರು. ಕ್ಲಬ್ಬಿನ ಈ ವರ್ಷದ ಸೇವಾ ಚಟುವಟಿಕೆಗಳ ಕಾರ್ಯಕ್ರಮಕ್ಕೆ ವಿದ್ಯುಕ್ತವಾಗಿ ಚಾಲನೆ ನೀಡಲಾಯಿತು.
ಲಯನ್ ಪ್ರಶಾಂತ ಭಂಡಾರಿ ಅಧ್ಯಕ್ಷ ಲಯನ್ಸ್ ಕ್ಲಬ್ ಅಂಬಲಪಾಡಿ ಫ್ರೈಡ್, ವಲಯ ಅಧ್ಯಕ್ಷ ಲಯನ್ ಜಯಾನಂದ ಕೊಡವರು, ಪ್ರಾಂತ್ಯ ಅಧ್ಯಕ್ಷ ಹರಿಪ್ರಸಾದ್ ರೈ ಉಪಸ್ಥಿತರಿದ್ದರು.
ಅಧ್ಯಕ್ಷ ಲಯನ್ ಉಮೇಶ್ ನಾಯಕ್ ಸ್ವಾಗತಿಸಿದರು. ಕಾರ್ಯದರ್ಶಿ ಲಯನ್ ಗೀತಾ ವಿ ರಾವ್ ವಂದಿಸಿದರು. ಲಯನ್ ಇಂದಿರಾ ಹೆಗಡೆ ನಿರೂಪಿಸಿದರು.