ಮಂಗಳೂರು: ಸಹಕಾರಿ ರಂಗದ ಧುರೀಣ ಸಹಕಾರ ರತ್ನ ಡಾ.ಎಂ.ಎನ್ ರಾಜೇಂದ್ರ ಕುಮಾರ್ ಸಹ ಪ್ರವರ್ತಕರಾಗಿರುವ ರೋಹನ್ ಮೊಂತೇರೋ ನಾಯಕತ್ವದ ಕಳೆದ 29 ವರ್ಷಗಳಿಂದ ನಿರ್ಮಾಣ ಕ್ಷೇತ್ರದಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ರೋಹನ್ ಕಾರ್ಪೋರೇಶನ್ ಬಿಜೈ ಮುಖ್ಯ ರಸ್ತೆಯಲ್ಲಿ ಅತ್ಯಾಧುನಿಕ ಸೌಕರ್ಯಗಳ ರೋಹನ್ ಸಿಟಿ ಸಮುಚ್ಛಯವನ್ನು ಅಭಿವೃದ್ದಿ ಪಡಿಸಿದ್ದು, ಇದರ ಪ್ರಾಥಮಿಕ ಕಾಮಗಾರಿ ಆರಂಭಗೊಂಡಿದ್ದು, ಇದೀಗ ಬುಕ್ಕಿಂಗ್ ಗೆ ವಿದ್ಯುಕ್ತ ಚಾಲನೆ ನೀಡಲಾಗುತ್ತಿದೆ ಎಂದು ಸಂಸ್ಥೆಯ ಮಾಲಕ ರೊಹನ್ ಮೊಂತೆರೋ ಹೇಳಿದರು.
ಅವರು ನಗರದಲ್ಲಿ ಪ್ರತಿಕಾಗೋಷ್ಟಿಯನ್ನುದ್ದೇಶಿ ಮಾತನಾಡಿದರು.
ಮಂಗಳೂರು ಮಹಾನಗರ ಪಾಲಿಕಾ ವ್ಯಾಪ್ತಿಯ ಬಿಜೈ ಮುಖ್ಯ ರಸ್ತೆ ಸ್ಮಾರ್ಟ್ ಸಿಟಿ ವ್ಯಾಪ್ತಿಗೆ ಬರುತ್ತದೆ. ಇಲ್ಲಿಂದ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ಕೇವಲ 10 ಕಿ.ಮೀ ದೂರವಿದ್ದು, ಸುತ್ತಲೂ ಅತ್ಯಾಧುನಿಕ ಸೌಕರ್ಯಯುಕ್ತ ಪರಿಸರವಿದೆ. 3.5 ಎಕರೆ ವಿಶಾಲ ಪ್ರದೇಶದಲ್ಲಿ ನಿರ್ಮಾಣವಾಗುತ್ತಿರುವ ರೋಹನ್ ಸಿಟಿಯಲ್ಲಿ ಭದ್ರತಾ ವ್ಯವಸ್ಥೆ, ನಿರಂತರ ವಿದ್ಯುತ್ ಮತ್ತು ನೀರು, ಯಾಂತ್ರೀಕೃತ ವಾಹನ ನಿಲುಗಡೆ, ಹಸಿರುವನ ಮತ್ತು ವಾಯುವಿಹಾರ ಸೌಲಭ್ಯ ಹೊಂದಿದೆ. ವಸತಿಗಾಗಿ 6 ಲಕ್ಷ ಚದರ ಅಡಿ ಮತ್ತು ವಾಣಿಜ್ಯ ಮಳಿಗೆಗೆಗಾಗಿ 2 ಲಕ್ಷ ಚದರ ಅಡಿ ಕಾಯ್ದಿರಿಸಲಾಗಿದೆ ಎಂದು ಅವರು ತಿಳಿಸಿದರು.
ಮಂಗಳೂರು ಸ್ಮಾರ್ಟ್ ಸಿಟಿಯ ಪ್ರಪ್ರಥಮ ಅಂತಾರಾಷ್ಟ್ರೀಯ ದರ್ಜೆಯ ಸಿಟಿ ಕ್ಲಬ್ ರೋಹನ್ ಸಿಟಿಯ ಪ್ರಧಾನ ಆಕರ್ಷಣೆಯಾಗಲಿದೆ. 24*7 ಲಭ್ಯತೆಯ ಎಲ್ಲಾ ಸೌಕರ್ಯಗಳು ಸಿಟಿ ಕ್ಲಬ್ ನಲ್ಲಿರಲಿವೆ. ರೋಹನ್ ಸಿಟಿಗೆ ರೇರಾ ಹಾಗೂ ಕ್ರೆಡಾಯ್ ಮಾನ್ಯತೆಯಿದ್ದು, ಪ್ರಮುಖ ರಾಷ್ಟ್ರೀಕೃತ ಬ್ಯಾಂಕ್ ಗಳ ಅನುಮೋದನೆ ಇರುವುದರಿಂದ ಗ್ರಾಹಕರಿಗೆ ಸುಲಭ ಸಾಲ ಸೌಲಭ್ಯ ದೊರೆಯಲಿದೆ. 31000 ರೂ ಗಳ ಮಾಸಿಕ ಕಂತಿನಲ್ಲಿ ಫ್ಲ್ಯಾಟ್ ಖರೀದಿಸಲು ನಿರ್ಮಾಣ ಸಂಸ್ಥೆಯ ವತಿಯಿಂದ ವಿಶೇಷ ಯೋಜನೆ ರೂಪಿಸಲಾಗಿದ್ದು, ಹೆಚ್ಚಿನ ಮಾಹಿತಿಗಾಗಿ ರೋಹನ್ ಕಾರ್ಪೋರೇಷನ್, ಮುಖ್ಯ ರಸ್ತೆ, ಬಿಜೈ ಮಂಗಳೂರು ಮಾರಾಟ ಕಚೇರಿಗೆ ಭೇಟಿ ನೀಡಬಹುದು ಅಥವಾ rohancorporation.in ಅಥವಾ ದೂರವಾಣಿ ಸಂಖ್ಯೆ: 9845490100 ಅನ್ನು ಸಂಪರ್ಕಿಸಬಹುದು ಎಂದರು.