ಮುಂಬೈ (ಮಹಾರಾಷ್ಟ್ರ): ಗುರುವಾರ ಮುಂಬೈನಲ್ಲಿ ಶೂಟಿಂಗ್ ಮುಗಿಸಿ ಹಿಂದುರುಗುವ ವೇಳೆ ನಟ ಶ್ರೇಯಸ್ ತಲ್ಪಾಡೆ ಗೆ ಹೃದಯಾಘಾತವಾಗಿದ್ದು ಆಂಜಿಯೋಪ್ಲಾಸ್ಟಿ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದಾರೆ.ಚಿತ್ರೀಕರಣ ಮುಗಿಸಿ ಹಿಂದಿರುಗುವ ವೇಳೆ ಬಾಲಿವುಡ್ ನಟ ಶ್ರೇಯಸ್ ತಲ್ಪಾಡೆ ಅವರಿಗೆ ಹೃದಯಾಘಾತವಾಗಿದೆ. ಸದ್ಯ ಶಸ್ತ್ರ ಚಿಕಿತ್ಸೆ ನಡೆದಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ವೆಲ್‌ಕಮ್ ಟು ದ ಜಂಗಲ್ ಚಿತ್ರವು 2007ಎ ‘ವೆಲ್‌ಕಮ್’ ಮೂವೀ 1 ರ ಮುಂದುವರೆದ 3 ನೇ ಭಾಗವಾಗಿದೆ. ಎರಡನೇ ಭಾಗ ‘ವೆಲ್‌ಕಮ್ ಬ್ಯಾಕ್’ 2015 ರಲ್ಲಿ ತೆರೆ ಕಂಡಿತು. ವೆಲ್‌ಕಮ್ ಟು ದಿ ಜಂಗಲ್ ಚಿತ್ರವನ್ನು ಅಹ್ಮದ್ ಖಾನ್ ನಿರ್ದೇಶಿಸುತ್ತಿದ್ದಾರೆ. ಈ ಚಿತ್ರದ ಟೀಸರ್ ಬಾಲಿವುಡ್ ಸೂಪರ್ ಸ್ಟಾರ್ ಅಕ್ಷಯ್ ಕುಮಾರ್ ಜನ್ಮದಿನದಂದು ಅಂದರೆ, ಇದೇ ವರ್ಷದ ಸೆಪ್ಟೆಂಬರ್ನಲ್ಲಿ ಅನಾವರಣಗೊಂಡಿತ್ತು. ಬಾಲಿವುಡ್ನ ಬಹುನಿರೀಕ್ಷಿತ ಸಿನಿಮಾ ಆಗಿರುವ ‘ವೆಲ್ಕಮ್ 3’ ಬಹುದೊಡ್ಡ ತಾರಾಗಣ ಹೊಂದಿದೆ.
ನಟನ ಆಪ್ತ ವಲಯಗಳಿಂದ ಬಂದಿರುವ ಮಾಹಿತಿ ಪ್ರಕಾರ, 47 ವರ್ಷದ ಶ್ರೇಯಸ್ ತಲ್ಪಾಡೆ ಬಾಲಿವುಡ್ ‘ವೆಲ್‌ಕಮ್ ಟು ದ ಜಂಗಲ್’ ಚಿತ್ರದ ಚಿತ್ರೀಕರಣದಲ್ಲಿ ಭಾಗಿಯಾಗಿದ್ದರು. ನಿನ್ನೆಯ ಚಿತ್ರೀಕರಣ ಮುಗಿದ ನಂತರ ನಟನಿಗೆ ಹೃದಯಾಘಾತವಾಗಿದೆ ಎಂದು ತಿಳಿದು ಬಂದಿದೆ. ತಕ್ಷಣ ಮುಂಬೈನ ಅಂಧೇರಿ ಪಶ್ಚಿಮದಲ್ಲಿರುವ ಬೆಲ್ಲೆ ವ್ಯೂ ಆಸ್ಪತ್ರೆಗೆ ದಾಖಲಿಸಲಾಗಿದೆ. ಶ್ರೇಯಸ್ಗೆ ಆಂಜಿಯೋಪ್ಲಾಸ್ಟಿ ಶಸ್ತ್ರ ಚಿಕಿತ್ಸೆ ಮಾಡಲಾಗಿದೆ. ಚಿಕಿತ್ಸೆ ಬಳಿಕ ಅವರ ಆರೋಗ್ಯ ಸ್ಥಿರವಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
‘ವೆಲ್ಕಮ್ ಟು ದ ಜಂಗಲ್’ ಸಿನಿಮಾವನ್ನು ಜ್ಯೋತಿ ದೇಶ್ಪಾಂಡೆ, ಫಿರೋಜ್ ನಾಡಿಯಾಡ್ವಾಲ ನಿರ್ಮಾಣ ಮಾಡುತ್ತಿದ್ದು, ಅಹಮದ್ ಖಾನ್ ಆಯಕ್ಷನ್ ಕಟ್ ಹೇಳಿದ್ದಾರೆ. 20 ವರ್ಷಗಳ ವಿರಾಮದ ಬಳಿಕ ನಟಿ ರವೀನಾ ಟಂಡನ್ ಮತ್ತು ನಟ ಅಕ್ಷಯ್ ಕುಮಾರ್ ಸ್ಕ್ರೀನ್ ಶೇರ್ ಮಾಡುತ್ತಿದ್ದಾರೆ. ಅಕ್ಷಯ್ ಕುಮಾರ್ ಜೊತೆ ರವೀನಾ ಟಂಡನ್, ದಿಶಾ ಪಟಾನಿ, ಲಾರಾ ದತ್ತಾ, ಜಾಕ್ವೆಲಿನ್ ಫರ್ನಾಂಡಿಸ್, ಸುನೀಲ್ ಶೆಟ್ಟಿ, ಸಂಜಯ್ ದತ್, ಪರೇಶ್ ರಾವಲ್, ಶ್ರೇಯಸ್ ತಲ್ಪಾಡೆ, ಅರ್ಶದ್ ವಾರ್ಸಿ, ತುಷಾರ್ ಕಪೂರ್, ರಾಜ್ಪಾಲ್ ಯಾದವ್, ಜಾನಿ ಲಿವರ್, ಕಿಕು ಶಾರ್ದಾ, ಕೃಷ್ಣ ಅಭಿಷೇಕ್, ಗಾಯಕರಾದ ದಲೆರ್ ಮೆಹಂದಿ, ಮಿಕಾ ಸಿಂಗ್ ಅಭಿನಯಿಸುತ್ತಿದ್ದಾರೆ. ಇನ್ನು 2024ರ ಕ್ರಿಸ್ಮಸ್ ಸಂದರ್ಭ ಡಿಸೆಂಬರ್ 20ರಂದು ಚಿತ್ರ ಮಂದಿರಗಳಲ್ಲಿ ವೆಲ್ಕಮ್ ಟು ದ ಜಂಗಲ್ (ವೆಲ್ಕಮ್ 3 )ಬಿಡುಗಡೆ ಆಗಲಿದೆ ಎಂದು ನಟ ಅಕ್ಷಯ್ಕುಮಾರ್ ಈ ಮೊದಲೇ ತಿಳಿಸಿದ್ದರು.