ಭಾರತದ ಪ್ರಮುಖ ಸಾರ್ವಜನಿಕ ವಲಯದ ಬ್ಯಾಂಕ್‌ಗಳಲ್ಲಿ ಒಂದಾದ ಬ್ಯಾಂಕ್ ಆಫ್ ಬರೋಡಾ ತನ್ನ “ಬಾಬ್ ಕಿ ಸಂಗ್, ತ್ಯೋಹಾರ್ ಕಿ ಉಮಂಗ್” ಹಬ್ಬದ ಅಂಗವಾಗಿ ಬಾಬ್ ಲೈಟ್‌ಉಳಿತಾಯ ಖಾತೆ–ಜೀವಮಾನ ಶೂನ್ಯ ಬ್ಯಾಲೆನ್ಸ್ ಉಳಿತಾಯ ಖಾತೆಯನ್ನು ಪರಿಚಯಿಸಿದೆ. ಗ್ರಾಹಕರಿಗೆ ಯಾವುದೇ ಕನಿಷ್ಟ ಬ್ಯಾಲೆನ್ಸ್ ಅಗತ್ಯವಿಲ್ಲದ ಬ್ಯಾಂಕಿಂಗ್ ಅನುಭವವನ್ನು ನೀಡುತ್ತದೆ.
ಇದಲ್ಲದೆ, ವಿವಿಧ ಗ್ರಾಹಕರ ವಿಭಾಗಗಳ ಅಗತ್ಯತೆಗಳನ್ನು ಪೂರೈಸಲು, ಖಾತೆಯಲ್ಲಿ ನಾಮಮಾತ್ರ ತ್ರೈಮಾಸಿಕ ಸರಾಸರಿ ಬ್ಯಾಲೆನ್ಸ ಅನ್ನು ನಿರ್ವಹಿಸುವ ಮೂಲಕ ಬಾಬ್ ಲೈಟ್ ಖಾತೆಯು ಜೀವಮಾನದ ಉಚಿತ ರುಪೇ ಪ್ಲಾಟಿನಂ ಡೆಬಿಟ್ ಕಾರ್ಡ್ ನೊಂದಿಗೆ ಬರುತ್ತದೆ ಮತ್ತು ಖಾತೆದಾರರು ಜೀವಮಾನದ ಉಚಿತ ಕ್ರೆಡಿಟ್ ಕಾರ್ಡ್ ಅನ್ನು ಸಹ ಪಡೆಯಬಹುದು.
ಬಾಬ್ ಲೈಟ್ ಉಳಿತಾಯ ಖಾತೆಯು ಹಬ್ಬದ ಋತುವಿನಲ್ಲಿ ಕೊಡುಗೆಗಳೊಂದಿಗೆ ನೀಡಲಾಗುತ್ತಿದೆ. ‘ಬಾಬ್ ಕಿ ಸಂಗ್, ತ್ಯೋಹಾರ್ ಕಿ ಉಮಂಗ್’ ಹಬ್ಬದ ಪ್ರಚಾರದ ಭಾಗವಾಗಿ, ಬ್ಯಾಂಕ್ ಆಫ್ ಬರೋಡಾ ಎಲೆಕ್ಟ್ರಾನಿಕ್ಸ್, ಕನ್ಸೂಮರ್ ಡ್ಯೂರಬಲ್ಸ್, ಪ್ರಯಾಣ, ಆಹಾರ, ಫ್ಯಾಷನ್, ಮನರಂಜನೆ, ಜೀವನ ಶೈಲಿ, ದಿನಸಿ ಮತ್ತುಆರೋಗ್ಯದಂತಹ ವಿಭಾಗಗಳಲ್ಲಿ ಪ್ರಮುಖ ಗ್ರಾಹಕ ಬ್ರಾಂಡ್‌ಗಳೊಂದಿಗೆ ಒಪ್ಪಂದ ಮಾಡಿಕೊಂಡಿದ್ದು, ಬ್ಯಾಂಕ್ ಆಫ್ ಬರೋಡಾ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ಗಳಲ್ಲಿ ಆಕರ್ಷಕ ಕೊಡುಗೆಗಳು ಮತ್ತು ರಿಯಾಯಿತಿಗಳನ್ನು ನೀಡುತ್ತದೆ. ಹಬ್ಬದ ಪ್ರಚಾರವು 31 ಡಿಸೆಂಬರ್, 2023 ರವರೆಗೆ ನಡೆಯಲಿದೆ ಮತ್ತುಕಾರ್ಡ್ ದಾರರು ರಿಲಯನ್ಸ್ ಡಿಜಿಟಲ್, ಕ್ರೋಮಾ, ಮೇಕ್ ಮೈ ಟ್ರಿಪ್, ಅಮೇಜಾನ್, ಬುಕ್ ಮೈ ಶೋ, ಮಿಂತ್ರ, ಸ್ವಿಗ್ಗಿ, ಝೋಮೆಟೊ ಮತ್ತುಇತರ ಬ್ರಾಂಡ್‌ಗಳಿಂದ ವಿಶೇಷ ಕೊಡುಗೆಗಳನ್ನು ಆನಂದಿಸಬಹುದು.
ಬ್ಯಾಂಕ್ ಆಫ್ ಬರೊಡಾದ ರಿಟೈಲ್ ಲಯಾಬಿಲಿಟೀಸ್ ಮತ್ತು ಎನ್‌ಆರ್‌ಐ ವ್ಯವಹಾರದ ಮುಖ್ಯ ಪ್ರಧಾನ ವ್ಯವಸ್ಥಾಪಕ ರವೀಂದ್ರ ಸಿಂಗ್ ನೇಗಿ ಪ್ರಕಾರ 10 ವರ್ಷಕ್ಕಿಂತ ಮೇಲ್ಪಟ್ಟಅಪ್ರಾಪ್ತ ವಯಸ್ಕರು ಸೇರಿದಂತೆ ಯಾವುದೇ ವ್ಯಕ್ತಿ ಖಾತೆಯನ್ನು ತೆರೆಯಬಹುದು. ಹೊಸ ಪೀಳಿಗೆಗೆ ಔಪಚಾರಿಕ ಬ್ಯಾಂಕಿಂಗ್ ಪರಿಸರ ವ್ಯವಸ್ಥೆಗೆ ಬಾಬ್ ಲೈಟ್ ಬಾಗಿಲು ತೆರೆಯುತ್ತದೆ ಮಹತ್ವಾಕಾಂಕ್ಷಿ ಭಾರತೀಯರ ಬ್ಯಾಂಕಿಂಗ್ ಅಗತ್ಯಗಳನ್ನು ಪೂರೈಸುವ ಗುರಿಯನ್ನು ಹೊಂದಿದೆ.












