ಮಂಗಳೂರು: ಪಣಂಬೂರು ಸಮುದ್ರ ತೀರದಿಂದ ನಾಟಿಕಲ್ ಮೈಲು ದೂರದಲ್ಲಿ ಸಂಭವಿಸಿದ ಬೋಟ್ ಮುಳುಗಡೆ ಪ್ರಕರಣದಲ್ಲಿ ನಾಪತ್ತೆಯಾಗಿದ್ದ ಆರು ಮಂದಿ ಮೀನುಗಾರರ ಪೈಕಿ ಇಬ್ಬರು ಮೀನುಗಾರರ ಮೃತದೇಹ ಮಂಗಳವಾರ ಮಧ್ಯಾಹ್ನದ ವೇಳೆ ಪತ್ತೆಯಾಗಿದೆ. ಉಳಿದ ನಾಲ್ವರಿಗಾಗಿ ಕರಾವಳಿ ಕಾವಲು ಪಡೆ ಹಾಗೂ ಮುಳುಗು ತಜ್ಞರು ಶೋಧ ಕಾರ್ಯ ಮುಂದುವರಿಸಿದ್ದಾರೆ.
ಶ್ರೀರಕ್ಷಾ ಹೆಸರಿನ ಪರ್ಸೀನ್ ಬೋಟ್ ನಲ್ಲಿ ಇಪ್ಪತ್ತು ಮೀನುಗಾರರು ಮೀನುಗಾರಿಕೆಗೆ ತೆರಳಿದ್ದರು. ಸೋಮವಾರ ತಡರಾತ್ರಿ ಮೀನು ತುಂಬಿಸಿಕೊಂಡು ಬಂದರಿಗೆ ಮರುಳುತ್ತಿದ್ದ ವೇಳೆ ಸಮುದ್ರದ ಮಧ್ಯೆ ಬೋಟ್ ಮುಳುಗಡೆಯಾಗಿ ದುರಂತ ನಡೆದಿದೆ.
ದುರಂತದಲ್ಲಿ 14 ಮಂದಿಯನ್ನು ರಕ್ಷಿಸಲಾಗಿದೆ. ನಾಪತ್ತೆಯಾದ ಆರು ಮಂದಿಯ ಪೈಕಿ ಇಬ್ಬರು ಮೃತದೇಹ ಸಿಕ್ಕಿದ್ದು, ಇನ್ನುಳಿದ ನಾಲ್ವರು ಮೀನುಗಾರಿಗಾಗಿ ಶೋಧ ಮುಂದುವರಿದಿದೆ. ಬಲೆಯಲ್ಲಿ ಸಿಲುಕಿಕೊಂಡಿರಬಹುದು ಎಂಬ ಶಂಕೆ ಇದ್ದು, ಬಲೆಯನ್ನು ಹರಿದು ಕಾರ್ಯಾಚರಣೆ ನಡೆಸಲಾಗುತ್ತಿದೆ.












