ಮೀನುಗಾರಿಕೆಗೆ ತೆರಳಿದ್ದ ಮಲ್ಪೆಯ ಬೋಟ್ ಮುಳುಗಡೆ: ಏಳು ಮೀನುಗಾರರ ರಕ್ಷಣೆ

ಉಡುಪಿ: ಮೀನುಗಾರಿಕೆಗೆ ತೆರಳಿದ್ದ ಮಲ್ಪೆಯ ಬೋಟ್ ವೊಂದು ಮುಳುಗಡೆಯಾದ ಘಟನೆ ಮಹಾರಾಷ್ಟ್ರ- ಗೋವಾ ಮಧ್ಯೆ ಸಮುದ್ರ ತೀರದಿಂದ ಸುಮಾರು 22 ನಾಟಿಕಲ್ ಮೈಲು ದೂರದಲ್ಲಿ ಸಂಭವಿಸಿದೆ. ಬೋಟ್ ನಲ್ಲಿದ್ದ ಏಳು ಮೀನುಗಾರರನ್ನು ರಕ್ಷಣೆ ಮಾಡಲಾಗಿದೆ.

ಮಲ್ಪೆಯ ತಾರಾನಾಥ್‌ ಕುಂದರ್‌ ಎಂಬುವವರಿಗೆ ಸೇರಿದ ಮಥುರಾ ಎಂಬ ಹೆಸರಿನ ಬೋಟ್ ಇದಾಗಿದೆ.
ಏಳು ಮೀನುಗಾರರನ್ನು ಹೊತ್ತ ಈ ಬೋಟ್ ನ. 17ರಂದು ಮಲ್ಪೆಯಿಂದ ಆಳ ಸಮುದ್ರ ಮೀನುಗಾರಿಕೆಗೆ ತೆರಳಿತ್ತು.

ನ. 26ರಂದು ಬೋಟ್ ನ ತಳಭಾಗಕ್ಕೆ ಘನ ವಸ್ತುವೊಂದು ಢಿಕ್ಕಿ ಹೊಡೆದ ಪರಿಣಾಮ ಸಮುದ್ರದಲ್ಲಿ ಮುಳುಗಡೆಯಾಗಿತ್ತು. ಬೋಟ್ ನಲ್ಲಿದ್ದ ಮೀನುಗಾರರನ್ನು ಇನ್ನೊಂದು ಬೋಟ್ ನ ಸಹಾಯದಿಂದ ರಕ್ಷಣೆ ಮಾಡಲಾಗಿದೆ. ದುರಂತದಿಂದ ₹ 65 ಲಕ್ಷ ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ.