ಮಣಿಪಾಲ: ರಾಷ್ಟ್ರೀಯ ಸ್ವಯಂಪ್ರೇರಿತ ರಕ್ತದಾನ ದಿನಾಚರಣೆ ಅಂಗವಾಗಿ ಮಾಹೆಯ ಕಾಲೇಜ್ ಆಫ್ ನರ್ಸಿಂಗ್ ನ ಆರೋಗ್ಯ ಮತ್ತು ಸಮಾಜ ಕಲ್ಯಾಣ ಸಮಿತಿ ವತಿಯಿಂದ ರಕ್ತದಾನ ಶಿಬಿರವನ್ನು ಅ. 01 ರಂದು ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯ ಬ್ಲಡ್ ಬ್ಯಾಂಕ್ನಲ್ಲಿ ಆಯೋಜಿಸಲಾಗಿತ್ತು.
ನರ್ಸಿಂಗ ವಿಭಾಗದ ಒಟ್ಟು 72 ವಿದ್ಯಾರ್ಥಿಗಳು, 8 ಶಿಕ್ಷಕರು ಮತ್ತು ಮಣಿಪಾಲ ಸಮೂಹ ಸಂಸ್ಥೆಯ ೧೦ ಸಿಬ್ಬಂದಿಗಳು ಸ್ವಯಂಪ್ರೇರಿತರಾಗಿ ರಕ್ತದಾನ ಮಾಡಿದರು.
ಆರೋಗ್ಯ ಮತ್ತು ಸಮಾಜ ಕಲ್ಯಾಣ ಸಮಿತಿ ವಿಭಾಗದ ಅಧ್ಯಕ್ಷೆ ನರ್ಸಿಂಗ್ ವಿದ್ಯಾರ್ಥಿನಿ ಅನುಷಾ ವರ್ಗೀಸ್ ಮತ್ತು ಕಾರ್ಯದರ್ಶಿ ನಿವ್ಯಾ ಬಿನೋಯ್ ಸಂಯೋಜಿಸಿದ್ದರು. ಸಹಾಯಕ ಪ್ರಾಧ್ಯಾಪಕಿಯರಾದ ಡಾ.ಮೆಲಿಟಾ ಶೀಲಿನಿ ಮತ್ತು ಶ್ರೀಮತಿ ಸವಿತಾ ಪ್ರಭು ಉಪಸ್ಥಿತರಿದ್ದರು.