ರಾಜ್ಯ ಬಿಜೆಪಿ ಯುವಮೋರ್ಚಾ ಕಾರ್ಯಕಾರಣಿ ಪ್ರಯುಕ್ತ ಬಿಜೆಪಿ ಜಿಲ್ಲಾ ಯುವ ಮೋರ್ಚಾದ ನೇತೃತ್ವದಲ್ಲಿ ಉಡುಪಿ ಜೋಡುಕಟ್ಟೆಯಿಂದ ಮಣಿಪಾಲದ ರಜತಾದ್ರಿವರೆಗೆ ಮಂಗಳವಾರ ಬೈಕ್ ರ್‍ಯಾಲಿ ಹಮ್ಮಿಕೊಳ್ಳಲಾಯಿತು.
ಬಿಜೆಪಿ ಯುವ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ತೇಜಸ್ವಿ ಸೂರ್ಯ ಅವರು ರ್‍ಯಾಲಿಗೆ ಚಾಲನೆ ನೀಡಿದರು. ಬಳಿಕ ಜೋಡುಕಟ್ಟೆಯಿಂದ ಆರಂಭಗೊಂಡ ಬೈಕ್ ರ್‍ಯಾಲಿ ಕೋರ್ಟ್ ರಸ್ತೆ, ಕೆಎಂ ಮಾರ್ಗ, ಸರ್ವಿಸ್ ಬಸ್ ನಿಲ್ದಾಣ, ಸಿಟಿ ಬಸ್ ನಿಲ್ದಾಣದ ಮಾರ್ಗವಾಗಿ ಕಲ್ಸಂಕ, ಎಂಜಿಎಂ ರಸ್ತೆಯ ಮೂಲಕ ಸಿಂಡಿಕೇಟ್ ಸರ್ಕಲ್ ಮೂಲಕ ಸಾಗಿ ಮಣಿಪಾಲ ಕಂಟ್ರಿ ಎನ್ ಹೋಟೆಲ್ ಬಳಿ ಮುಕ್ತಾಯಗೊಂಡಿತು.