ಭಾರತೀಯ ಜನತಾ ಪಕ್ಷದ ‘ಪ್ರಜಾ ಪ್ರಣಾಳಿಕೆ’ ಬಿಡುಗಡೆ: ಬಿಪಿಎಲ್ ಕುಟುಂಬಕ್ಕೆ ನಂದಿನಿ ಹಾಲು; ವರ್ಷಕ್ಕೆ ಮೂರು ಉಚಿತ ಸಿಲಿಂಡರ್ ಘೋಷಣೆ

ಬೆಂಗಳೂರು: ಚುನಾವಣೆಗೆ ಇನ್ನು ಒಂಭತ್ತು ದಿನಗಳು ಬಾಕಿ ಉಳಿದಿದ್ದು, ಭಾರತೀಯ ಜನತಾ ಪಕ್ಷವು ತನ್ನ ಚುನಾವಣಾ ಪ್ರಜಾ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ. ಇಂದು ಬಿಜೆಪಿ ರಾಷ್ರೀಯ ಅಧ್ಯಕ್ಷ ಜೆಪಿ ನಡ್ಡಾ ಪ್ರಣಾಳಿಕೆಯನ್ನು ಬೆಂಗಳೂರಿನ ಶಾಂಗ್ರಿಲಾ ಹೋಟೆಲ್‌ನಲ್ಲಿ ಬಿಡುಗಡೆ ಮಾಡಿದರು. ಕಾರ್ಯಕ್ರಮದಲ್ಲಿ ಜೆಪಿ ನಡ್ಡಾ ಅವರೊಂದಿಗೆ ಪಕ್ಷದ ನಾಯಕರು ಭಾಗಿಯಾದರು.

ಬಿಪಿಎಲ್​​ ಕುಟುಂಬಕ್ಕೆ ವರ್ಷಕ್ಕೆ ಮೂರು ಅಡುಗೆ ಅನಿಲ​​ ನೀಡುವುದಾಗಿ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಲಾಗಿದೆ. ಪ್ರತಿ ವರ್ಷ ಯುಗಾದಿ, ಗಣೇಶ ಚತುರ್ಥಿ ಹಾಗೂ ದೀಪಾವಳಿ ಹಬ್ಬದಂದು ಮೂರು ಸಿಲಿಂಡರ್​​ಗಳನ್ನು ಉಚಿತವಾಗಿ ನೀಡಲಾಗುವುದು. ಬಡವರಿಗಾಗಿ ‘ಅಟಲ್ ಆಹಾರ ಕೇಂದ್ರ’ ಸ್ಥಾಪನೆ ಮಾಡುವ ಭರವಸೆಯನ್ನು ನೀಡಿದೆ.

Image

ಹಿರಿಯ ನಾಗರಿಕರಿಗೆ ಪ್ರತಿ ವರ್ಷ ಸಂಪೂರ್ಣ ಆರೋಗ್ಯ ತಪಾಸಣೆಯ ಸೌಲಭ್ಯವನ್ನು ಉಚಿತವಾಗಿ ಕಲ್ಪಿಸುವ ಭರವಸೆಯನ್ನು ನೀಡಿದೆ. ಇದರೊಂದಿಗೆ ಮಿಷನ್​ ಸ್ವಾಸ್ಥ್ಯ ಕರ್ನಾಟಕ ಅಡಿ ಸರ್ಕಾರಿ ಆಸ್ಪತ್ರೆಗಳಲ್ಲಿ ಮೂಲಸೌಲಭ್ಯ ಸುಧಾರಿಸುವ ಹಾಗೂ ನಗರದ ಪ್ರದೇಶದಲ್ಲಿ ಪ್ರತಿ ವಾರ್ಡ್​​ಗೂ ಲ್ಯಾಬೊರೇಟರಿ ಸೌಲಭ್ಯವಿರುವ ನಮ್ಮ ಕ್ಲಿನಿಕ್ ಗಳನ್ನು​ ಸ್ಥಾಪಿಸುವ ಭರವಸೆ ನೀಡಲಾಗಿದೆ.

Image

ಬಿಪಿಎಲ್​ ಕುಟುಂಬಕ್ಕೆ ಪ್ರತೀ ದಿನ ಅರ್ಧ ಲೀಟರ್​​ ನಂದಿನಿ ಹಾಲು ಹಾಗೂ ಶ್ರೀಅನ್ನ ಯೋಜನೆ ಅಡಿ 5 ಕೆಜಿ ಅಕ್ಕಿ ಜೊತೆಗೆ 5 ಕೆಜಿ ಸಿರಿಧಾನ್ಯ ನೀಡುವುದಾಗಿ ಘೋಷಣೆ ಮಾಡಿದೆ. ಸರ್ವರಿಗೂ ಸೂರು ಯೋಜನೆ ಅಡಿ 10 ಲಕ್ಷ ವಸತಿ ನಿವೇಶನ, ಗ್ರಾಮೀಣ ಭಾಗದಲ್ಲಿ 10 ಲಕ್ಷ ಮನೆ, ನಗರ ಪ್ರದೇಶದಲ್ಲಿ 5 ಲಕ್ಷ ಮನೆ ನಿರ್ಮಾಣಕ್ಕೆ ಪ್ರತಿ ಕುಟುಂಬಕ್ಕೆ 5 ಲಕ್ಷ ರೂಪಾಯಿ ನೀಡಲಾಗುವುದು.

Image

ಪ.ಜಾತಿ ಹಾಗೂ ಪ.ಪಂ ದ ಮಹಿಳೆಯರಿಗೆ 10,000 ಸಾವಿರ ಡೆಪಾಸಿಟ್ ಯೋಜನೆಯನ್ನು ಘೋಷಣೆ ಮಾಡಿದೆ. ಬಿಪಿಎಲ್ ಪಡಿತರ ಹೊಂದಿರುವವರಿಗೆ ಆಯುಷ್ಮಾನ್ ಭಾರತ ಯೋಜನೆ ಅಡಿ 10 ಲಕ್ಷ ರೂಪಾಯಿ ಹಾಗೂ ಎಪಿಎಲ್ ಕಾರ್ಡುದಾರರಿಗೆ 5 ಲಕ್ಷ ರೂ ವಿಮೆ ನೀಡಲಾಗುವುದು ಎಂದು ಘೋಷಿಸಿದೆ.

Image

ಕೊಡುಗೆಗೆಳ ಜೊತೆಗೆ ಏಕರೂಪ ನಾಗರಿಕ ಸಂಹಿತೆ ಮತ್ತು ರಾಷ್ಟ್ರೀಯ ನಾಗರಿಕರ ನೋಂದಣಿ (ಎನ್‌ಆರ್‌ಸಿ) ಅನುಷ್ಠಾನದ ಭರವಸೆ ನೀಡಲಾಗಿದೆ.

Image