ಉಡುಪಿ ಜಿಲ್ಲಾ ಮಹಿಳಾ ಮೋರ್ಚಾ ವತಿಯಿಂದ ಅಷಾಡದಲ್ಲೊಂದು ಕಮಲ ಕೂಟ ಕಾರ್ಯಕ್ರಮ ಈ ಬಾರಿ ವಿಶೇಷವಾಗಿ ಆಚರಿಸಲಾಯಿತು.ರಾಜ್ಯ ಮಹಿಳಾ ಮೋರ್ಚಾ ಅಧ್ಯಕ್ಷೆ ಭಾರತಿ ಶೆಟ್ಟಿ ಉದ್ಘಾಟಿಸಿ,ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ನಯನಾ ಗಣೇಶ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲೆಯ 6 ಮಂಡಲಗಳ ವಿವಿಧ ಕ್ಷೇತ್ರಗಳಲ್ಲಿ ಮುಖ್ಯವಾಗಿ ನಾಟಿ ವೈಧ್ಯೆ ಮೂಲಕ ಗ್ರಾಮೀಣ ಜನರ ಸ್ವಾಸ್ಥ ಕಾಪಾಡಿದ ಮತ್ತು ಪಾಡ್ದನ ಮೂಲಕ ಜನಪದ ಸಂಸ್ಕೃತಿ ಯನ್ನು ನಾಡಿಗೆ ಪಸರಿಸುವ ಕಾರ್ಯ ಮಾಡಿದ 6 ಹಿರಿಯ ಸಾಧಕಿಯರಾದ ಗಿರಿಜಾ ಸುವರ್ಣ,ತನ್ಯರು ಕೋಟ್ಯಾನ್,ವನಾಜ ಶೆಟ್ಟಿ,ಲಕ್ಷ್ಮಿ ಬಾಯಿ,ಸೂಲಗಿತ್ತಿ ಬಿಚ್ಚಿ , ಪಾಡ್ದನಗಾರ್ತಿ ಮುತ್ತು ಎರ್ಮಾಲ್ ಅವರನ್ನು ಗುರುತಿಸಿ ಸನ್ಮಾನಿಸಲಾಯಿತು.ಕಾರ್ಯಕ್ರಮದಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಮಟ್ಟಾರ್ ರತ್ನಾಕರ ಹೆಗ್ಡೆ,ಜಿ.ಪಂ ಉಪಾಧ್ಯಕ್ಷೆ ಶೀಲಾ ಕೆ.ಶೆಟ್ಟಿ,ಸದಸ್ಯೆ ಗೀತಾಂಜಲಿ ಸುವರ್ಣ, ಪ್ರಧಾನ ಕಾರ್ಯದರ್ಶಿ ರಶ್ಮಿತಾ ಬಿ ಶೆಟ್ಟಿ. ತಾಲುಕು ಪಂ ಅಧ್ಯಕ್ಷೆ ನೀತಾ ಗುರುರಾಜ್,ಜಿಲ್ಲಾ ಮಹಿಳಾ ಮೋರ್ಚಾ ನಗರ ಅಧ್ಯಕ್ಷೆ ರಜನಿ ಹೆಬ್ಬಾರ್,ಮಂಡಲ ಮಹಿಳಾ ಮೋರ್ಚಾ ಅಧ್ಯಕ್ಷರಾದ ಪ್ರಿಯದರ್ಶಿನಿ,ಗುಣರತ್ನ,ಪ್ರಮೀಳಾ ಹರೀಶ್,ಕೇಸರಿ ಯುವರಾಜ್,ವೀಣಾ ನಾಯಕ್ ಉಪಸ್ಥಿತರಿದ್ದು,ಭಾರತಿ ಚಂದ್ರಶೇಖರ್ ಕಾರ್ಯಕ್ರಮ ನಿರೂಪಿಸಿದರು.ಮಹಿಳಾ ಮೋರ್ಚಾ ಕಾರ್ಯಕರ್ತೆಯರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.ಮಧ್ಯಾಹ್ನ ಆಷಾಡ ಮಾಸದಲ್ಲಿ ಮಾಡುವ ಹಳ್ಳಿಯ ತಿನಿಸುಗಳ ಭೋಜನ ವ್ಯವಸ್ಥೆ ಮಾಡಲಾಗಿತ್ತು