ಉಡುಪಿ-ಚಿಕ್ಕಮಗಳೂರು ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಹಿರಿಯ ಕಾರ್ಯಕರ್ತರ ಗೌರವಾರ್ಪಣೆ ಮತ್ತು ಕಾರ್ಯಕರ್ತರ ಸಮಾವೇಶ ಏ. 12 ರಂದು ಕೊಡವೂರಿನ ಲಕ್ಷ್ಮೀನಗರ ಪೇಟೆಯಲ್ಲಿ ನಡೆಯಿತು.
ಮುಂಬರುವ ಲೋಕಸಭಾ ಚುನಾವಣೆಯು ಈ ದೇಶದ ಭವಿಷ್ಯದ ಪೀಳಿಗೆಯ ಚುನಾವಣೆ. ಈ ಚುನಾವಣೆಯನ್ನು ನಾವೇ ಎದುರು ನಿಂತು ಎದುರಿಸಬೇಕಾದಂತಹ ಅವಶ್ಯಕತೆ ಇದೆ. ಬಹು ಸಂಖ್ಯಾತ ಹಿಂದೂಗಳ ಭಾವನೆಗಳಿಗೆ ಧಕ್ಕೆ ತರುವಂತಹ ಕಾಂಗ್ರೆಸ್ ಅನ್ನು ಧಿಕ್ಕರಿಸೋಣ ಬಹು ಸಂಖ್ಯಾತರ ರಾಮ ದೇವರನ್ನು ಕಾಲ್ಪನಿಕ ರಾಮ ಎಂದು ಹೇಳಿದ್ದಾರೆ. ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗಬೇಕಾದರೆ ಅನೇಕ ಕಾರ್ಯಕರ್ತರ ಬಲಿದಾನಕ್ಕೆ ಕಾರಣ ಇದೇ ಕಾಂಗ್ರೆಸ್. ರಾಮ ಕಾಲ್ಪನಿಕ ಎಂದಿರುವುದು ಇದೇ ಕಾಂಗ್ರೆಸ್, ರಾಮ ಸೇತುವೆಯೂ ಕಾಲ್ಪನಿಕ ಎಂದು ಹೇಳಿರುವುದೇ ಇದೇ ಕಾಂಗ್ರೆಸ್ ಈ ಸೇತುವೆಯನ್ನು ಒಡೆಯಲು ಹೋಗಿರುವುದು ಇದೇ ಕಾಂಗ್ರೆಸ್, ರಾಮ ಮಂದಿರ ನಿರ್ಮಾಣ ಆಗಬಾರದು ಎಂದು 26 ವಕೀಲರನ್ನು ನೇಮಿಸಿದ್ದು ಇದೇ ಕಾಂಗ್ರೆಸ್, ಎಲ್ಲಾ ಸಂದರ್ಭಗಳಲ್ಲೂ ಹಿಂದೂ ಭಾವನೆಗಳಿಗೆ ಧಕ್ಕೆ ತರುವಂಥದ್ದು ಇದೇ ನೀಚ ಕಾಂಗ್ರೆಸ್. ನಾವು ಇದೇ ಕಾಂಗ್ರೆಸ್ ಅನ್ನು ಧಿಕ್ಕರಿಸುವ ಅವಶ್ಯಕತೆ ಇದೆ.
ಕರ್ನಾಟಕದ ಮುಖ್ಯಮಂತ್ರಿಗೆ ಹಿಂದುಗಳ ಮತ ಅವಶ್ಯಕತೆ ಇಲ್ಲ ಎಂದು ಹೇಳಿದ್ದಾರೆ. ಆದ್ದರಿಂದ ನಮ್ಮ ಮುಂದಿನ ಪೀಳಿಗೆ ಬದುಕಬೇಕಾದರೆ ನಾವು ರಾಮ ಮಂದಿರ ನಿರ್ಮಿಸಿದಂತಹ ವ್ಯಕ್ತಿಗಳ ಪರವಾಗಿರಬೇಕು ಹಾಗೂ ದೇಶದ ಅಭಿವೃದ್ಧಿ, ಭದ್ರತೆಯ ಪರವಿರುವಂತಹ ಮೋದಿಯ ಪರವಾಗಿರಬೇಕು ಕೋಟ ಶ್ರೀನಿವಾಸ ಪೂಜಾರಿಯನ್ನು ಗೆಲ್ಲಿಸಬೇಕು. ರಾಮ ಮಂದಿರವನ್ನು ವಿರೋಧಿಸಿದವರನ್ನು ನಾವೆಲ್ಲರೂ ಸೇರಿ ವಿರೋಧಿಸೋಣ. ಧರ್ಮದ ಪಕ್ಷದ ಜೊತೆಯಾಗಿರೋಣ. ಅಧರ್ಮೀಯರನ್ನು ಸೋಲಿಸೋಣ ಎಂದು ವಿಜಯ್ ಕೊಡವೂರು ಕರೆ ನೀಡಿದರು.
ಈ ಸಂದರ್ಭದಲ್ಲಿ ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ, ಶಾಸಕ ಯಶ್ ಪಾಲ್ ಸುವರ್ಣ, ಉಡುಪಿ ನಗರ ಬಿಜೆಪಿ ಮಂಡಲ ಅಧ್ಯಕ್ಷ ದಿನೇಶ್ ಅಮೀನ್, ಪಕ್ಷದ ಮುಖಂಡ ಪ್ರಮೋದ್ ಮಧ್ವರಾಜ್, ಕಿರಣ್ ಕುಮಾರ್ ಬೈಲೂರು, ಬೈಕಾಡಿ ಸುಪ್ರಸಾದ್ ಶೆಟ್ಟಿ, ಜಯಂತಿ ಪೂಜಾರಿ, ಗಿರೀಶ್ ಅಂಚನ್, ಪ್ರಮುಖ ಪ್ರಭಾತ್ ಕೊಡವೂರು, ದೀಪಕ್, ದಿನೇಶ್ ಕೊಡವೂರು, ಯಶೋಧ ರಾಜೇಂದ್ರ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.