ಮಣಿಪಾಲದಲ್ಲಿ ವಿಶ್ವದರ್ಜೆಯ ಬಯೋನೆಸ್ಟ್ ಇನ್ಕ್ಯುಬೇಶನ್ ಸೌಲಭ್ಯ ಉದ್ಘಾಟನೆ

ಮಣಿಪಾಲ: ಬಯೋಟೆಕ್ನಾಲಜಿ ಇಲಾಖೆಯ ಬಯೋಟೆಕ್ನಾಲಜಿ ಇಂಡಸ್ಟ್ರಿ ರಿಸರ್ಚ್ ಅಸಿಸ್ಟೆನ್ಸ್ ಕೌನ್ಸಿಲ್ (BIRAC) ಬೆಂಬಲಿತ ಬಯೋನೆಸ್ಟ್ ಸೌಲಭ್ಯ- ಕರ್ನಾಟಕ ಸರ್ಕಾರ ಬಯೋಇನ್‌ಕ್ಯುಬೇಟರ್ (ಮಣಿಪಾಲದ ತಂತ್ರಜ್ಞಾನ ವ್ಯಾಪಾರ ಇನ್ಕ್ಯುಬೇಟರ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್, ಮಣಿಪಾಲ) ಇದನ್ನು ಶನಿವಾರದಂದು ಮಣಿಪಾಲದಲ್ಲಿ ಉದ್ಘಾಟಿಸಲಾಯಿತು.

ಬೆಂಗಳೂರಿನ ಮಣಿಪಾಲ ಶಿಕ್ಷಣ ಸಂಸ್ಥೆ ಮತ್ತು ಮೆಡಿಕಲ್ ಗ್ರೂಪ್ ಅಧ್ಯಕ್ಷ ಡಾ. ರಂಜನ್ ಆರ್ ಪೈ, ಡಾ. ಮನೀಶ್ ದಿವಾನ್, ಡಿಜಿಎಮ್ ಮತ್ತು ಮುಖ್ಯಸ್ಥ- ಸ್ಟ್ರಾಟಜಿ ಪಾರ್ಟನರ್ ಶಿಪ್ ಮತ್ತು ಎಂಟರ್ ಪ್ರೂನರ್ ಶಿಪ್ ಡೆವೆಲಪ್ ಮೆಂಟ್, BIRAC ದೆಹಲಿ, ಮಾಹೆ ಪ್ರೊ ಚಾನ್ಸೆಲರ್ ಡಾ.ಎಚ್.ಎಸ್.ಬಲ್ಲಾಳ್, ವೈಸ್ ಚಾನ್ಸೆಲರ್ ಲೆಫ್ಟಿನೆಂಟ್ ಜನರಲ್ (ಡಾ.) ಎಂ.ಡಿ. ವೆಂಕಟೇಶ್, ಮತ್ತು ಮಾಹೆಯ ಸರ್ವ ಸದಸ್ಯರು ಉಪಸ್ಥಿತಿತರಿದ್ದರು.

ಮಾಹೆ, ಮಣಿಪಾಲದಲ್ಲಿ ಬಯೋನೆಸ್ಟ್ ಇನ್ಕ್ಯುಬೇಶನ್ ಸೌಲಭ್ಯವು, ಯಶಸ್ವಿ ವ್ಯಾಪಾರ ಮಾದರಿಗಳೊಂದಿಗೆ ಜ್ಞಾನಾಧಾರಿತ ಉದ್ಯಮದ ಅಭಿವೃದ್ಧಿಗಾಗಿ ತಂತ್ರಜ್ಞಾನದ ಆವಿಷ್ಕಾರಗಳನ್ನು ಉತ್ತೇಜಿಸುತ್ತದೆ. 10000 ಚದರ ಅಡಿಯ ಬಯೋನೆಸ್ಟ್ ಸೌಲಭ್ಯವು ಮಾಹೆ, ಮಣಿಪಾಲದ ಹೃದಯಭಾಗದಲ್ಲಿದೆ. ಸ್ಟಾರ್ಟ್ ಅಪ್ ಗಳಿಗೆ ಬೇಕಾಗುವ ಸುಸಜ್ಜಿತ ಮತ್ತು ಅತ್ಯಾಧುನಿಕ ಪ್ರಯೋಗಾಲಯಗಳು, ಕಛೇರಿಗಳು, ಸುಸಜ್ಜಿತ ಎಲೆಕ್ಟ್ರಾನಿಕ್ಸ್ ಉಪಕರಗಳು, ಲ್ಯಾಬ್ ಗಳು, ಮೈಕ್ರೋಫ್ಲೂಯಿಡಿಕ್ ಲ್ಯಾಬ್, ರೂಮ್ ಗಳು, ಕಚೇರಿಗಳು, ಬೋರ್ಡ್ ರೂಮ್ ಗಳು, ಮೀಟಿಂಗ್ ರೂಮ್‌ಗಳು, ಕೆಫೆಟೇರಿಯಾ ಮತ್ತು ಇನ್ನಿತರ ಸೌಕರ್ಯಗಳನ್ನು ಬಯೋನೆಸ್ಟ್ ಇನ್ಕ್ಯುಬೇಶನ್ ಸೌಲಭ್ಯವು ಒಳಗೊಂಡಿದೆ.

ಬಯೋಫಾರ್ಮಾದ ವಿವಿಧ ಕ್ಷೇತ್ರಗಳಾದ, ಬಯೋಮೆಡಿಕಲ್ ಸಾಧನಗಳು, ದಂತ ನಾವೀನ್ಯತೆ, ಜೈವಿಕ ತಂತ್ರಜ್ಞಾನ, ಆರೋಗ್ಯ ಮತ್ತು ರೋಗನಿರ್ಣಯ ಮುಂತಾದವುಗಳಿಗೆ ವಿಶ್ವ ದರ್ಜೆಯ ಅಧ್ಯಾಪಕರನ್ನು ಒದಗಿಸುವ ಕೆಲಸವನ್ನೂ ಬಯೋಇನ್ಕ್ಯುಬೇಶನ್ ಮಾಡುತ್ತದೆ. ಪ್ರಪಂಚದಾದ್ಯಂತದ ನವೋದ್ಯಮಿಗಳು ಈ ಬಯೋಇನ್ಕ್ಯುಬೇಶನ್ ಸೌಲಭ್ಯವನ್ನು ಬಳಸಿಕೊಂಡು ತಮ್ಮ ಸ್ಟಾರ್ಟ್-ಅಪ್ ಗಳನ್ನು ಪ್ರಾರಂಭಿಸಬಹುದು.