ಪಟ್ನಾ: 2047 ರ ವೇಳೆಗೆ ಭಾರತವನ್ನು ಇಸ್ಲಾಮಿಕ್ ರಾಷ್ಟ್ರವನ್ನಾಗಿ ಮಾಡುವ ಪ್ರತಿಜ್ಞೆ ಮಾಡಿರುವ ಇಸ್ಲಾಮಿಕ್ ಸಂಘಟನೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್ಐ) ನ ಭೀಕರ ಯೋಜನೆಯನ್ನು ಬಹಿರಂಗಪಡಿಸಿರುವುದಾಗಿ ಬಿಹಾರ ಪೊಲೀಸರು ಹೇಳಿದ್ದಾರೆ.
ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ, ಒಂದು ರಹಸ್ಯ ದಾಖಲೆಯಲ್ಲಿ, ಹಿಂಬಾಲಕರನ್ನು ತನ್ನ ಹಿಂದೆ ಒಟ್ಟುಗೂಡಿಸಿ ತನ್ನ ಮಹಾ ಯೋಜನೆಯನ್ನು “ವಾಸ್ತವೀಕರಿಸಲು” ಹೇಳಿದೆ. ಸಂಘಟನೆಯು ತನ್ನ ಕಾರ್ಯಸೂಚಿಯನ್ನು ಮತ್ತಷ್ಟು ವಿವರಿಸುತ್ತಾ, ಪಿ.ಎಫ್.ಐ ದಾಖಲೆಯು 10 ಪ್ರತಿಶತದಷ್ಟು ಭಾರತೀಯ ಮುಸ್ಲಿಮರು ಗುಂಪಿನ ಹಿಂದೆ ಒಟ್ಟುಗೂಡಿದರೂ, ಅದು ಭಾರತವನ್ನು ಇಸ್ಲಾಮಿಕ್ ದೇಶವಾಗಿ ಪರಿವರ್ತಿಸಲು ಸಾಧ್ಯವಾಗುತ್ತದೆ ಎಂದು ಬಹಿರಂಗಪಡಿಸಿದೆ.
#WATCH | An excerpt from 8-page long document they shared amongst themselves titled 'India vision 2047' says, 'PFI confident that even if 10% of total Muslim population rally behind it, PFI would subjugate coward majority community & bring back the glory': Bihar SSP Manish Kumar pic.twitter.com/MIId3qUXZE
— ANI (@ANI) July 13, 2022
ಪಾಟ್ನಾದ ಉಪನಗರವಾದ ಫುಲ್ವಾರಿ ಷರೀಫ್ನಲ್ಲಿ ಕಾರ್ಯಾಚರಣೆಯ ನೇತೃತ್ವ ವಹಿಸಿದ್ದ ಸಹಾಯಕ ಪೊಲೀಸ್ ಅಧೀಕ್ಷಕ (ಎಎಸ್ಪಿ) ಮನೀಶ್ ಕುಮಾರ್, ಪಿಎಫ್ಐ ದಾಖಲೆಯನ್ನು ಉಲ್ಲೇಖಿಸಿ, “ಹೇಡಿ ಹಿಂದೂ ಸಮುದಾಯವನ್ನು ವಶಪಡಿಸಿಕೊಳ್ಳಲು ಮತ್ತು ಇಸ್ಲಾಮಿಕ್ ಆಳ್ವಿಕೆಯ ಕಳೆದುಹೋದ ವೈಭವವನ್ನು ಭಾರತಕ್ಕೆ ಮರಳಿ ತರಲು ಸಂಘಟನೆ ಬಯಸುತ್ತದೆ” ಈ ರೀತಿ ಬರೆಯಲಾಗಿದೆ ಎಂದು ಹೇಳಿದ್ದಾರೆ.
ಕಳೆದ ಎರಡು ತಿಂಗಳಿಂದ ಕೆಲವರು ಬೇರೆ ರಾಜ್ಯಗಳಿಂದ ಬಂದು ಟಿಕೆಟ್ ಕಾಯ್ದಿರಿಸಲು ಹಾಗೂ ಹೋಟೆಲ್ ಗಳಲ್ಲಿ ತಂಗಲು ಆಗಾಗ ಹೆಸರು ಬದಲಿಸಿಕೊಂಡು ಬರುತ್ತಿದ್ದಾರೆ ಎಂದು ತಿಳಿಸಿದರು. ಒಟ್ಟು 26 ಜನರ ವಿರುದ್ಧ ಎಫ್ಐಆರ್ ದಾಖಲಾಗಿದ್ದು, ಮೂವರನ್ನು ಬಂಧಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಬಂಧಿತ ಮೊಹಮ್ಮದ್ ಜಲಾವುದ್ದೀನ್ ಜಾರ್ಖಂಡ್ನ ನಿವೃತ್ತ ಪೊಲೀಸ್ ಅಧಿಕಾರಿಯಾಗಿದ್ದು, ಅಥರ್ ಪರ್ವೇಜ್ ನಿಷೇಧಿತ ಸಂಘಟನೆಯಾದ ಸ್ಟೂಡೆಂಟ್ಸ್ ಇಸ್ಲಾಮಿಕ್ ಮೂವ್ಮೆಂಟ್ ಆಫ್ ಇಂಡಿಯಾ (ಸಿಮಿ) ಸದಸ್ಯರಾಗಿದ್ದಾರೆ. ಇಬ್ಬರೂ ಯುವಕರಿಗೆ ಶಸ್ತ್ರಾಸ್ತ್ರ ತರಬೇತಿ ನೀಡುತ್ತಿದ್ದರು ಎನ್ನಲಾಗಿದೆ.
ಸುದ್ದಿ ಮೂಲ: ಎ.ಎನ್.ಐ