ಬೆಂಗಳೂರು: ಕನ್ನಡದ ದೊಡ್ಡ ರಿಯಾಲಿಟಿ ಶೋ ಅಂದ್ರೆ ಅದು ಬಿಗ್ಬಾಸ್. ಈಗಾಗಲೇ 11 ಸೀಸನ್ಗಳು ಯಶಸ್ವಿಯಾಗಿ ಪ್ರಸಾರ ಕಂಡಿವೆ. ಇದೀಗ ಬಿಗ್ಬಾಸ್ ಸೀಸನ್ 12 ಬಂದೇ ಬಿಡ್ತು. ಈಗಾಗಲೇ ಸೀಸನ್ 11 ಮುಕ್ತಾಯಗೊಂಡು 5 ತಿಂಗಳು ಪೂರ್ಣಗೊಂಡಿದೆ. ಮುಂದಿನ ಸೀಸನ್ಗಾಗಿ ಏನಾದ್ರೂ ಮಾಹಿತಿ ಸಿಗುತ್ತಾ ಅಂತ ಇಷ್ಟು ದಿನ ಕಾತರದಿಂದ ಕಾಯುತ್ತಿದ್ದ ವೀಕ್ಷಕರಿಗೆ ಅಂತೂ ಇಂತೂ ಬಿಗ್ ಬಾಸ್ ತಂಡ ಅಪ್ಡೇಟ್ ಕೊಟ್ಟಿದೆ.
ಬಿಗ್ಬಾಸ್ ಸೀಸನ್ 12- ಕಿಚ್ಚ ಸುದೀಪ್ ನಿರೂಪಣೆ:
ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್ಬಾಸ್ ಸೀಸನ್ 12ಕ್ಕೂ ಕಿಚ್ಚ ಸುದೀಪ್ ಅವರೇ ನಿರೂಪಣೆ ವಹಿಸಲಿದ್ದಾರೆ. ಈ ಬಗ್ಗೆ ಖುದ್ದು ಬಿಗ್ಬಾಸ್ ಟೀಮ್ ಇಂದು ನಡೆದ ಪ್ರೆಸ್ ಮೀಟ್ನಲ್ಲಿ ಹಂಚಿಕೊಂಡಿದೆ.
ಕಲರ್ಸ್ ಕನ್ನಡ ವಾಹಿನಿ ಕಡೆಯಿಂದ ಎಂ.ಜಿ ರಸ್ತೆಯ ತಾಜ್ ಹೋಟೆಲ್‌ನಲ್ಲಿ ಇಂದು (ಜೂ.30) ಪತ್ರಿಕಾಗೋಷ್ಠಿಯನ್ನು ಆಯೋಜನೆ ಮಾಡಲಾಗಿತ್ತು. ಈ ವೇಳೆ ಈ ಬಾರಿಯ ಬಿಗ್ಬಾಸ್ ಸೀಸನ್ 12 ನಿರೂಪಣೆ ಮಾಡಲು ಕಿಚ್ಚ ಸುದೀಪ್ ಅವರು ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ ಎಂದು ಬಿಗ್ಬಾಸ್ ಟೀಮ್ ಮಾಹಿತಿ ನೀಡಿದೆ.












