ಬಿಗ್ ಬಾಸ್ ಮನೆಗೆ ಬರ್ತಿದೆ ಆರು ಭಾಷೆ ಬಲ್ಲ ರೋಬೋಟ್ ಹಬುಬು ಡಾಲ್‌ !

ಮತ್ತೆ ಎಲ್ಲೆಲ್ಲೂ ಬಿಗ್ ಬಾಸ್ ಶೋ ಸುದ್ದಿ ಜೋರಾಗಿ ಕೇಳಿ ಬರ್ತಿದೆ. ಅತ್ಯಂತ ಜನಪ್ರಿಯ ರಿಯಾಲಿಟಿ ಶೋ ಆಗಿರುವ ಬಿಗ್ ಬಾಸ್, ಕನ್ನಡ, ಹಿಂದಿ, ತೆಲುಗಿನಲ್ಲಿ ಶುರುವಾಗಲು ಸಿದ್ದತೆ ನಡೆಸಿವೆ. ಇನ್ನೇನು ದಿನಾಂಕ ಕೂಡ ಘೋಷಣೆಯಾಗಬಹುದು. ಈ ನಡುವೆ ಬಿಗ್ ಬಾಸ್ ಕುರಿತ ಹೊಸ ಅಪ್ಢೇಟ್ ವೊಂದು ಸಿಕ್ಕಿದ್ದು ಪ್ರೇಕ್ಷಕರಿಗೆ ಇದು ಅಚ್ಚರಿ ಕೊಡುವ ಅಪ್ಢೇಟ್ ಆಗಿದೆ.

ಹೌದು ಬಿಗ್ ಬಾಸ್ ಮನೆಗೆ ಹೊಸ ಅತಿಥಿ ಬರುತ್ತಿದ್ದಾರೆ ಅವರ ಹೆಸರು ಹಬುಬು ಡಾಲ್‌, ಅಂದರೆ ಗೊಂಬೆ, ಆದರೆ ಇದು ಅಂತಿಂಥ ಗೊಂಬೆಯಲ್ಲ, ಎಐ ಗೊಂಬೆ(ಕೃತಕಬುದ್ದಿಮತ್ತೆಯ ಗೊಂಬೆ). ಯುಎಇ ಮೂಲದ ಈ ರೊಬೋಟ್  ಆರಕ್ಕೂ ಹೆಚ್ಚು ಭಾಷೆ ಮಾತಾಡುತ್ತಂತೆ. ಭಾವನೆಗಳಿಗೂ ಸ್ಪಂದನೆ ನೀಡುತ್ತಂತೆ. ಈ ಗೊಂಬೆ ಸದ್ಯ ಎಂಟ್ರಿ ಕೊಡುತ್ತಿರುವುದು ಹಿಂದಿ ಬಿಗ್ ಬಾಸ್ ಗೆ ಎನ್ನುವ ಸುದ್ದಿ ಲೀಕ್ ಆಗಿದೆ. ಹಿಂದಿ ಬಿಗ್ ಬಾಸ್ ಕಾರ್ಯಕ್ರಮವನ್ನು ನಟ ಸಲ್ಮಾಂ ಖಾನ್ ನಡೆಸಿಕೊಡುತ್ತಿದ್ದಾರೆ. ಹಾಗಾಗಿ ಈ ಸಲ ಈ ರೊಬೋಟ್ ಹಿಂದಿ ಬಿಗ್ ಬಾಸ್ ನಲ್ಲಿ ಮಿಂಚಲಿದ್ದು ಪ್ರೇಕ್ಷಕರಿಗೆ ಸಖತ್ ರಂಜನೆ ಕೊಡ್ತಾನಾ? ಎಂದು ಕಾದುನೋಡಬೇಕು.

ಕನ್ನಡ ಬಿಗ್ ಬಾಸ್ ಗೂ ಈ ಹಬುಬ್‌ ಡಾಲ್‌ ಎಂಟ್ರಿ ಕೊಡ್ತಾನಾ? ಇಲ್ವಾ? ಎನ್ನುವ ಕುರಿತು ಮಾಹಿತಿ ಸದ್ಯ ಲಭಿಸಿಲ್ಲ.ಆದರೆ ಕನ್ನಡಕ್ಕೂ ಬರುತ್ತಾನೆ ಈ ಆಕರ್ಷಕ ರೊಬೋಟ್ ಎನ್ನುತ್ತಿದೆ ಮೂಲಗಳು. ಕಾದು ನೋಡುವ ಕಾತರ ಬಿಗ್ ಬಾಸ್ ಅಭಿಮಾನಿಗಳದ್ದಾಗಿದೆ.