‘ರಾಜ್ಯ ಸರ್ಕಾರ’ದಿಂದ ಬಿಗ್ ಶಾಕ್: ‘ಫ್ರೀ ವಿದ್ಯುತ್’ ನಿರೀಕ್ಷೆಯಲ್ಲಿದ್ದವರಿಗೆ ಈ ತಿಂಗಳು ಕಟ್ಟಬೇಕು ‘ಬಿಲ್

ಬೆಂಗಳೂರು: ಜುಲೈ.27ರ ಒಳಗಾಗಿ ಗೃಹ ಜ್ಯೋತಿ ಯೋಜನೆಯಡಿಯಲ್ಲಿ ನೋಂದಾಯಿಸಿಕೊಂಡವರಿಗೂ ವಿದ್ಯುತ್ ಉಚಿತವಿಲ್ಲದೇ, 100 ರಿಂದ 300ರವರೆಗೆ ವಿದ್ಯುತ್ ಬಿಲ್ ಬಾಕಿ ಕಟ್ಟುವಂತೆ ನೀಡಲಾಗಿದೆ. 200 ಯೂನಿಟ್ ವರೆಗೆ ಉಚಿತ ವಿದ್ಯುತ್. ಅದಕ್ಕಿಂತ ಹೆಚ್ಚು ಬಳಕೆ ಮಾಡಿದವರು ಸಂಪೂರ್ಣ ಬಿಲ್ ಕಟ್ಟಬೇಕು ಎಂದು ರಾಜ್ಯ ಸರ್ಕಾರ ಹೇಳಿತ್ತು. ಆದ್ರೇ ಅದಕ್ಕೂ ಕಡಿಮೆ ಬಳಕೆ ಮಾಡಿದವರಿಗೂ ಬಿಲ್ ನೀಡಿ ಶಾಕ್ ನೀಡಲಾಗಿದೆ.
ಜುಲೈ.27ರ ಒಳಗಾಗಿ ಗೃಹ ಜ್ಯೋತಿ ಯೋಜನೆಯ ( Gruha Jyoti Scheme ) ಅಡಿಯಲ್ಲಿ ಉಚಿತ ವಿದ್ಯುತ್ ಯೋಜನೆಗೆ ನೋಂದಾಯಿಸಿಕೊಂಡವರಿಗೆ 200 ಯೂನಿಟ್ ವರೆಗೆ ವಿದ್ಯುತ್ ಉಚಿತ ( Free Electricity ) ಎಂದು ರಾಜ್ಯ ಸರ್ಕಾರ ಹೇಳಿತ್ತು. ಇದೀಗ ವಿವಿಧ ಎಸ್ಕಾಂಗಳಿಂದ ವಿದ್ಯುತ್ ಬಿಲ್ ನೀಡಲಾಗಿದ್ದು, ಫ್ರೀ ವಿದ್ಯುತ್ ನಿರೀಕ್ಷೆಯಲ್ಲಿದ್ದವರಿಗೆ ನೂರಾರು ರೂಪಾಯಿ ಬಿಲ್ ನೀಡಿ ಬಿಗ್ ಶಾಕ್ ನೀಡಲಾಗಿದೆ.

ಬಹುತೇಕ ವಿದ್ಯುತ್ ಗ್ರಾಹಕರು ತಾವು ಪ್ರತಿ ತಿಂಗಳು 100 ಯೂನಿಟ್ ವರೆಗೆ ಬಳಕೆ ಮಾಡ್ತೀವಿ. 200 ಯೂನಿಟ್ ವರೆಗೆ ಏನೂ ಯೂಸ್ ಮಾಡೋದಲಿಲ್. ನಮಗೆ ಶೂನ್ಯ ಬಿಲ್ ಬರಲಿದೆ ಎಂಬುದಾಗಿ ಭಾವಿಸಿದ್ದರು. ಆದ್ರೇ ಎಸ್ಕಾಂಗಳಿಂದಲೇ ಕಳೆದ ಒಂದು ವರ್ಷದ ಬಳಕೆಯ ಯೂನಿಟ್ ಗಳಲ್ಲಿ ಸರಾಸರಿ ಲೆಕ್ಕ ಹಾಕಿ ಇಂತಿಷ್ಟು ಯೂನಿಟ್ ಮಾತ್ರವೇ ಫ್ರೀ ಎಂಬುದಾಗಿ ಫಿಕ್ಸ್ ಮಾಡಲಾಗಿದೆ.
ಜುಲೈ.27ರ ಒಳಗಾಗಿ ಗೃಹ ಜ್ಯೋತಿ ಯೋಜನೆಗೆ ನೋಂದಾಯಿಸಿಕೊಂಡವರಿಗೆ 200 ಯೂನಿಟ್ ವರೆಗೆ ಬಳಕೆ ಮಾಡುವಂತ ವಿದ್ಯುತ್ ಗೆ ಉಚಿತ ಎಂಬುದಾಗಿ ರಾಜ್ಯ ಸರ್ಕಾರ ಘೋಷಣೆ ಮಾಡಿತ್ತು. ಆದ್ರೇ ಅಷ್ಟು ಬಳಕೆ ಮಾಡದೇ ಕೇವಲ 57, 58 ಯೂನಿಟ್ ವಿದ್ಯುತ್ ಬಳಕೆ ಮಾಡಿದವರಿಗೂ ಎಸ್ಕಾಂ ನಿಗದಿ ಪಡಿಸಿದಂತ ಫ್ರೀ ಯೂನಿಟ್ 8, 9, 10 ಯೂನಿಟ್ ಗಳಿಗೆ ಮಾತ್ರ ಉಚಿತ ನೀಡಿ, ಮಿಕ್ಕ ಬಳಕೆಯ ವಿದ್ಯುತ್ ಗೆ ಗ್ರಾಹಕರಿಗೆ 100 ರಿಂದ 200ಕ್ಕೂ ಹೆಚ್ಚು ಬಿಲ್ ನೀಡಲಾಗಿದೆ.

ರಾಜ್ಯದ ಜನರಿಗೆ ಸರ್ಕಾರ ಗೃಹ ಜ್ಯೋತಿ ಯೋಜನೆಯ ಅಡಿಯಲ್ಲಿ ಉಚಿತ ವಿದ್ಯುತ್ ಎಂಬುದಾಗಿ ಹೇಳುತ್ತಲೇ, ಇದೀಗ ನೋಂದಾಯಿಸಿಕೊಂಡವರಿಗೂ ಬಾಕಿ ಬಿಲ್ ಕಟ್ಟುವಂತೆ ನೀಡಿದೆ. ಇದು ಜನರಿಗೆ ಮಾಡಿದ ಮಹಾ ಮೋಸವಾಗಿದೆ. 200 ಯೂನಿಟ್ ವರೆಗೆ ಫ್ರೀ ಎಂಬುದಾಗಿ ಹೇಳಿ ಸರ್ಕಾರ ಮೋಸ ಮಾಡಿದ್ದು ಸರಿಯಲ್ಲಿ. ನಾವು ಬಾಕಿ ಬಿಲ್ ಕಟ್ಟುವಂತೆ ನೀಡಿರುವಂತ ವಿದ್ಯುತ್ ಬಿಲ್ ಕಟ್ಟೋದಿಲ್ಲ ಎಂಬುದಾಗಿ ಅಸಮಾಧಾನ, ಆಕ್ರೋಶವನ್ನು ಹೊರ ಹಾಕಿದ್ದಾರೆ.ಜನರಿಗೆ ಈ ತಿಂಗಳು ಶೂನ್ಯ ಬಿಲ್ ಬರಲಿದೆ ಎಂಬುದಾಗಿ ರಾಜ್ಯ ಸರ್ಕಾರ ಹೇಳಿತ್ತು. ಆದ್ರೇ ಶೂನ್ಯ ಬಿಲ್ ನಿರೀಕ್ಷೆಯಲ್ಲಿದ್ದವರಿಗೆ ಬಿಗ್ ಶಾಕ್ ಎನ್ನುವಂತೆ ಎಸ್ಕಾಂಗಳು ನಿಗದಿ ಪಡಿಸಿದ್ದಂತ 8, 9, 10 ಯೂನಿಟ್ ಗಳಿಗೆ ಮಾತ್ರವೇ ಗೃಹ ಜ್ಯೋತಿ ಯೋಜನೆಯ ಅಡಿಯಲ್ಲಿ ಉಚಿತ ವಿದ್ಯುತ್ ಸೌಲಭ್ಯ ಅನ್ವಯಿಸಲಾಗಿದೆ. ಅದಷ್ಟು ಮಾತ್ರ ಫ್ರೀ ಬಿಟ್ಟು, ಇನ್ನುಳಿದಂತ ಬಳಕೆಯ ಯೂನಿಟ್ ಗೆ ಬಿಲ್ ನೀಡಲಾಗಿದೆ.