ಚೆನ್ನೈ: ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಮತ್ತೊಂದು ಆಘಾತ ಉಂಟಾಗಿದೆ. ಪ್ರಮುಖ ಸ್ಪಿನ್ನರ್ ಹರಭಜನ್ ಸಿಂಗ್ ವೈಯಕ್ತಿಕ ಕಾರಣ ಮುಂದಿಟ್ಟು ಈ ಬಾರಿಯ ಐಪಿಎಲ್ ಟೂರ್ನಿಯಿಂದ ಹಿಂದೆ ಸರಿದಿದ್ದಾರೆ. ಈ ಬಗ್ಗೆ ಸ್ಪೋರ್ಟ್ ಸ್ಟಾರ್ ವರದಿ ಮಾಡಿದೆ.
ಐಪಿಎಲ್ ನಿಯಮಗಳ ಪ್ರಕಾರ, ಕೊರೊನಾದ ಈ ಸಂದರ್ಭದಲ್ಲಿ ಯಾವುದೇ ಆಟಗಾರ ಪಂದ್ಯದಲ್ಲಿ ಭಾಗವಹಿಸುವುದಿಲ್ಲ ಎಂದು ಒಮ್ಮೆ ಅಧಿಕಾರಿಗಳಿಗೆ ತಿಳಿಸಿದರೆ ಮತ್ತೆ ಅವರಿಗೆ ಪಾಲ್ಗೊಳ್ಳಲು ಅವಕಾಶವಿಲ್ಲ.
ಈಗಾಗಲೇ ತಂಡದ ಪ್ರಮುಖ ಆಟಗಾರರಾದ ದೀಪಕ್ ಚಾಹರ್ ಮತ್ತು ರುತುರಾಜ್ ಗಾಯಕ್ವಾಡ್ ಕೊರೊನಾ ಸೋಂಕಿತರಾಗಿದ್ದು, ಸುರೇಶ್ ರೈನಾ ಸಹ ಐಪಿಎಲ್ನಲ್ಲಿ ಭಾಗವಹಿಸುತ್ತಿಲ್ಲ. ಇದೀಗ ಹರಭಜನ್ ಸಹ ಕಣದಿಂದ ಹಿಂದೆ ಸರಿದಿರುವುದು ತಂಡಕ್ಕೆ ದೊಡ್ಡ ಉಂಟುಮಾಡಿದೆ.