ಅಮೆರಿಕಾ: ರಿಪಬ್ಲಿಕನ್ ಪಾರ್ಟಿಯ ಭದ್ರಕೋಟೆಯಾಗಿದ್ದ ಅರಿಜೋನಾ ರಾಜ್ಯದಲ್ಲೂ ಜೋ ಬೈಡನ್ ಭರ್ಜರಿ ಗೆಲುವು ದಾಖಲಿಸಿದ್ದಾರೆ.
ಬೈಡನ್ ಅವರಿಗೆ 11 ಎಲೆಕ್ಟೋರ್ ಮತಗಳ ಸಿಕ್ಕಿದ್ದು, ಈ ಮೂಲಕ ಡೊನಾಲ್ಡ್ ಟ್ರಂಪ್ ವಿರುದ್ಧ ಭಾರೀ ಮುನ್ನಡೆ ಸಾಧಿಸಿದ್ದಾರೆ. ಇದರ ಮೂಲಕ 290 ಸ್ಥಾನಗಳನ್ನು ಬೈಡನ್ ತನ್ನ ತೆಕ್ಕೆಗೆ ಹಾಕಿಕೊಂಡಿದ್ದಾರೆ.
ಬೈಡನ್ ಅವರು 11,000 ಮತಗಳ ಅಂತರದಿಂದ ವಿಜಯ ಸಾಧಿಸಿದ್ದಾರೆ. 1996ರ ಬಳಿಕ ಅರಿಜೋನಾದಲ್ಲಿ ಒಮ್ಮೆಯೂ ಡೆಮಾಕ್ರಟಿಕ್ ಪಕ್ಷದ ಪರವಾಗಿ ಮತ ಬಂದಿರಲಿಲ್ಲ. 1996ರಲ್ಲಿ ಅಧ್ಯಕ್ಷ ಬಿಲ್ ಕ್ಲಿಟನ್ ಬಳಿಕ ಮೊದಲ ಬಾರಿ ಬೈಡನ್ ಅವರು ಈ ರೀತಿಯ ಗೆಲುವನ್ನು ಪಡೆದಿದ್ದಾರೆ ಎಂದು ಎಂದು ಅಮೆರಿಕದ ಪ್ರಮುಖ ಮಾಧ್ಯಮಗಳು ವರದಿ ಮಾಡಿವೆ.