ಕೊಡವೂರು: ಅಯೋಧ್ಯೆಯಲ್ಲಿ ಪ್ರಭು ಶ್ರೀ ರಾಮ ದೇವರ ಪ್ರಾಣ ಪ್ರತಿಷ್ಠೆಯ ಸಂದರ್ಭದಲ್ಲಿ ಮತ್ತಷ್ಟು ಸೇವಾ ಕಾರ್ಯ ಮಾಡಿ ದೀನ ದುರ್ಬಲ ಬಡವರಿಗೆ ಬೆಳಕು ನೀಡುವ ಉದ್ದೇಶದಿಂದ ಕೊಡವೂರು ವಾರ್ಡಿನಲ್ಲಿ ನಗರಸಭಾ ಸದಸ್ಯ ಕೆ.ವಿಜಯ್ ಕೊಡವೂರು ಇವರ ನೇತೃತ್ವದಲ್ಲಿ 30 ದಿನಗಳ ರಾಮೋತ್ಸವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಯಿತು.
ಕೊಡವೂರು ವಾರ್ಡಿನ ನಾಗರಿಕರು ಈ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಇದರ ಅಂಗವಾಗಿ ಮನೆ ಇಲ್ಲದವರಿಗೆ ಹಾಗೂ ತುಂಬಾ ಹಳೆಯದಾದ ಮನೆ ಹೊಂದಿದವರಿಗೆ ಹೊಸ ಮನೆ ನಿರ್ಮಾಣವನ್ನು ಕೇಂದ್ರ ಸರಕಾರ ಮತ್ತು ರಾಜ್ಯ ಸರ್ಕಾರದ ಅನುದಾನ ಜೊತೆಯಲ್ಲಿ ಕಾರ್ಯಕರ್ತರ ಶ್ರಮದಾನದಿಂದ ಮಾಡಿಕೊಡಲಾಗುತ್ತಿದೆ.
ಇದೀಗ ಬಾಚನಬೈಲು ಪರಿಸರದ ಅಪ್ಪಿಯವರ ಮನೆಯ ಗುದ್ದಲಿ ಪೂಜೆ ನಡೆದಿದ್ದು ಮನೆ ನಿರ್ಮಾಣ ಕಾರ್ಯ ನಡೆಯುತ್ತಿದೆ.