ಕಾರ್ಕಳ: ಭೀಮ ಘರ್ಜನೆ ಸಂಘಟನೆಯ ಶಾಖೆ ಉದ್ಘಾಟನೆ ಕಾರ್ಯಕ್ರಮ ಸೆ.6 ರಂದು ನಲ್ಲೂರು ಪರಪ್ಪಾಡಿಯಲ್ಲಿ ನಡೆಯಿತು.
ಶಾಖೆಯನ್ನು ಕರ್ನಾಟಕ ದಲಿತ ಸಂಘರ್ಷ ಸಮಿತಿ ಭೀಮಘರ್ಜನೆ ಇದರ ಸಂಚಾಲಕರಾದ ಉದಯ್ ಕುಮಾರ್ ತಲ್ಲೂರು ನೆರವೇರಿಸಿ ಮಾತನಾಡಿ, ಮಹಾನಾಯಕರ ಚಿಂತನೆಗಳಿಂದ ಪ್ರಭಾವಿತರಾಗಿ ನಾವು ಬದಲಾಗಬೇಕು. ಹೋರಾಟದ ಹಾದಿಯಲ್ಲಿ ನಡೆಯಬೇಕು. ಸವಲತ್ತುಗಳನ್ನು ಪಡೆದುಕೊಳ್ಳಬೇಕು, ನಮ್ಮ ಹೋರಾಟ ಹೇಗಿರಬೇಕೆಂದರೆ ನಾವು ಮಾಡುವ ಹೋರಾಟ ಇತಿಹಾಸದ ಪುಟದಲ್ಲಿ ಅಚ್ಚೊತ್ತಬೇಕು ಎಂದು ಹೇಳಿದರು.
ಮಂಗಳೂರು ಜಿಲ್ಲಾ ಸಂಚಾಲಕರಾದ ಪ್ರಭಾಕರ್ ಮಾತನಾಡಿ, ದೌರ್ಜನ್ಯಕ್ಕೊಳಗಾದವರ ಕಣ್ಣೀರು ಒರೆಸುವ ಕಾರ್ಯವನ್ನು ಸಂಘಟನೆ ಮಾಡಬೇಕು ಎಂದರು.
ಅಧ್ಯಕ್ಷತೆಯನ್ನು ಜಿಲ್ಲಾ ಸಂಚಾಲಕ ಚಂದ್ರ ಅಲ್ತಾರ್ ವಹಿಸಿ ಪಧಾಧಿಕಾರಿಗಳ ಆಯ್ಕೆ ನಡೆಸಿದರು.ಸತ್ಯ ಸಾರಮಣಿ ಸೇವಾಸಮಿತಿ ಅಧ್ಯಕ್ಷ ಶೀನಾ,ತಾಲೂಕು ಸಂಘಟನೆಯ ಸಂಚಾಲಕ ಸಂಜೀವ ಪಳ್ಳಿ,ಸುರೇಂದ್ರ ಬಜಗೋಳಿ, ಸುರೇಶ್ ಮಾಳ,ಆನಂದ ನಕ್ರೆ, ಮಹಿಳಾಸಂಘದ ಸುನೀತಾ ಅಂಡಾರು ಉಪಸ್ಥಿತರಿದ್ದರು.
ನಲ್ಲೂರು ಪರಪ್ಪಾಡಿ ಶಾಖೆಯ ಸಂಚಾಲಕರಾಗಿ ರಮೇಶ್ ಮಹಿಳಾ ಒಕ್ಕೂಟದ ದೇವಕಿ, ಖಾಜಾಂಚಿಯಾಘಿ ಗಜೇಂದ್ರ,ಪ್ರಜ್ಞಾ ಆಯ್ಕೆಯಾದರು.ಉದಯ್ ಕುಮಾರ್ ತಲ್ಲೂರ್ ಪ್ರಮಾಣವಚನ ಭೋಧಿಸಿದರು. ಹರೀಶ್ ಪರಪ್ಪಾಡಿ ನಿರೂಪಿಸಿ ವಂದಿಸಿದರು.