ಭಾರತೀಯ ಕೋಸ್ಟ್‌ ಗಾರ್ಡ್‌ನಿಂದ 23 ಮೀನುಗಾರರ ರಕ್ಷಣೆ

ಮಂಗಳೂರು: ತಾಂತ್ರಿಕ ದೋಷದಿಂದ ಸಮುದ್ರದಲ್ಲಿ ಸಿಲುಕಿಕೊಂಡು ಅತಂತ್ರದಲ್ಲಿದ್ದ 23 ಮಂದಿ ಮೀನುಗಾರರನ್ನು ಭಾರತೀಯ ಕೋಸ್ಟ್ ಗಾರ್ಡ್ ರಕ್ಷಣೆ ಮಾಡಿದೆ.
ಕರ್ನಾಟಕ ಮೂಲದ ಎನ್ಎಸ್ ಜಿ ಹೆಸರಿನ ಬೋಟ್ ಆಳಸಮುದ್ರ ಮೀನುಗಾರಿಕೆಗೆ ತೆರಳಿತ್ತು. ಭಟ್ಕಳ ಸಮೀಪದ ಸಮುದ್ರ ತೀರದಿಂದ ಸುಮಾರು 30 ನಾಟಿಕಲ್ ಮೈಲು ದೂರದಲ್ಲಿ ರಕ್ಷಣೆ ಮಾಡಲಾಗಿದೆ.
ಇಂಜಿನ್ ನಲ್ಲಿ ಕಾಣಿಸಿಕೊಂಡ ತಾಂತ್ರಿಕ ದೋಷದಿಂದ ಸಮಸ್ಯೆಗೆ ಸಿಲುಕಿತ್ತು.‌ ಬೋಟ್ ನಲ್ಲಿ 23 ಮಂದಿ ಮೀನುಗಾರರಿದ್ದರು.‌ ಅಪಾಯದಲ್ಲಿರುವ ಬಗ್ಗೆ ಮಾಹಿತಿ ಪಡೆದು ಸಮುದ್ರದಲ್ಲಿ ಗಸ್ತು ತಿರುಗುತ್ತಿದ್ದ ಭಾರತೀಯ ಕೋಸ್ಟ್ ಗಾರ್ಡ್ ಶಿಫ್ ರಾಜದೂತ್ ರಕ್ಷಣಾ ಕಾರ್ಯಾಚರಣೆ ಮಾಡಿದೆ.
ಮೀನುಗಾರಿಕಾ ಬೋಟ್ ಪವನಸುತ ಮೂಲಕ ಇಂಜಿನ್ ವೈಫಲ್ಯ ಹೊಂದಿದ ಬೋಟ್ ನ್ನು ಭಟ್ಕಳ ಸಮುದ್ರ ತೀರಕ್ಕೆ ತಂದಿದೆ.