ಉಡುಪಿ ‘ಭಾರತ್‌ ಮಾರ್ಕೆಟಿಂಗ್‌’ ಬೃಹತ್‌ ಸಾಮಗ್ರಿಗಳ ಜಿ.ಎಂ.ಬ್ರ್ಯಾಂಡ್‌ ಶೋರೂಂ ಉದ್ಘಾಟನೆ

ಉಡುಪಿ: ಉಡುಪಿ ಬನ್ನಂಜೆ ನಾರಾಯಣಗುರು ಸಂಕೀರ್ಣಕ್ಕೆ ಸ್ಥಳಾಂತರಗೊಂಡ ಭಾರತ್‌ ಮಾರ್ಕೆಟಿಂಗ್‌ ಸಂಸ್ಥೆಯ ಅತ್ಯಾಧುನಿಕ ಬೃಹತ್‌ ಸಂಗ್ರಹದ ವಿದ್ಯುತ್‌ ಜೋಡಣೆ ಸಾಮಗ್ರಿಗಳ ಜಿ.ಎಂ.ಬ್ರ್ಯಾಂಡ್‌ ಶೋರೂಂ ಅನ್ನು ಜಿ.ಎಂ. ಮಾಡ್ಯುಲರ್‌ನ ಬ್ರ್ಯಾಂಡ್‌ ರಾಯಭಾರಿ ಬಾಲಿವುಡ್‌ ನಟ ಸುನಿಲ್‌ ಶೆಟ್ಟಿ ಶುಕ್ರವಾರ ಉದ್ಘಾಟಿಸಿದರು.

 ಈ ಸಂದರ್ಭದಲ್ಲಿ ಮಾತನಾಡಿದ ಅವರು, ಜಿ.ಎಂ. ಬ್ರ್ಯಾಂಡ್‌ನ ಉತ್ಪನ್ನಗಳು ಹೆಸರುವಾಸಿಯಾಗಿದೆ. ಇಲ್ಲಿ ಉತ್ತಮ ಗುಣಮಟ್ಟದ ವಿವಿಧ ಉತ್ಪನ್ನಗಳಿವೆ. ಅಲ್ಲದೆ, ಗ್ರಾಹಕರ ವಿಶ್ವಾಸಗಳಿಸುವಲ್ಲಿಯೂ ಇದು ಯಶಸ್ವಿಯಾಗಿದೆ,

 ಜಿ.ಎಂ. ಸಂಸ್ಥೆಯ ಯಾವುದೇ ಕಾರ್ಯಕ್ರಮಕ್ಕೂ ಕಲಾವಿದನಾಗಿ ಹೋಗುವುದಿಲ್ಲ. ಅದರ ಕುಟುಂಬ ಸದಸ್ಯನಾಗಿ ಹೋಗುತ್ತೇನೆ, ಇದು ನನಗೆ ಖುಷಿಯ ಸಂಗತಿ ಎಂದವರು ಹೇಳಿದರು. ಉಡುಪಿ ಕ್ರೆಡಾೖ ಅಧ್ಯಕ್ಷ ಜೆರ್ರಿ ವಿನ್ಸೆಂಟ್‌ ಡಯಾಸ್‌ ಮಾತನಾಡಿ, ಉಡುಪಿ ಜಗತ್ತಿನಾದ್ಯಂತ ಹೆಸರು ಗಳಿಸಿದ ನಗರ. ಈ ನಗರಕ್ಕೆ ಜಿ.ಎಂ. ಮಾಡ್ಯುಲರ್‌ ಬ್ರ್ಯಾಂಡ್‌ ಮಳಿಗೆ ಅಗತ್ಯವಿತ್ತು. ಆ ಅಗತ್ಯತೆ ಈಗ  ಈಡೇರಿದಂತಾಗಿದೆ ಎಂದರು.

ಶ್ರೀಮತಾ ಸೌಹಾರ್ದ ಕೋ- ಆಪರೇಟಿವ್‌ನ ಜಿ.ಎನ್‌. ಹೆಗಡೆ ಹೀರೇಸರ, ಸಾಯಿರಾಧಾ ಡೆವಲಪರ್ನ್‌ ವ್ಯವಸ್ಥಾಪಕ ನಿರ್ದೇಶಕ ಮನೋಹರ ಎಸ್‌. ಶೆಟ್ಟಿ, ಉಜ್ವಲ್‌ ಗ್ರೂಪ್‌ನ ವ್ಯವಸ್ಥಾಪಕ ನಿರ್ದೇಶಕ ಪುರುಷೋತ್ತಮ ಪಿ. ಶೆಟ್ಟಿ, ಬಡಗಬೆಟ್ಟು ಕ್ರೆಡಿಟ್‌ ಕೋ- ಆಪರೇಟಿವ್‌ ಸೊಸೈಟಿಯ ಪ್ರಧಾನ ವ್ಯವಸ್ಥಾಪಕ ಜಯಕರ ಶೆಟ್ಟಿ ಇಂದ್ರಾಳಿ, ಬಲ್ಲಾಳ್‌ ಡೆವಲಪರ್ಸ್‌ನ ನಾಗರಾಜ ಬಲ್ಲಾಳ್‌, ಜಿಲ್ಲಾ ವಿದ್ಯುತ್‌ ಉತ್ಪನ್ನಗಳ ಗುತ್ತಿಗೆದಾರರ ಸಂಘದ ಅಧ್ಯಕ್ಷ ನಾಗರಾಜ ಆರ್‌. ರಾವ್‌, ಉಡುಪಿ ತಾಲ್ಲೂಕು ಅಧ್ಯಕ್ಷ ಗುರುಪ್ರಸಾದ್‌ ಭಟ್‌, ಬನ್ನಂಜೆ ನಾರಾಯಣಗುರು ಬಿಲ್ಲವ ಸೇವಾ ಸಂಘದ ಅಧ್ಯಕ್ಷ ನರಸಿಂಹ ಸುವರ್ಣ, ಭಾರತ್‌ ಮಾರ್ಕೆಟಿಂಗ್‌ ಸಂಸ್ಥೆಯ ಮಾಲೀಕ ಸುಬ್ರಹ್ಮಣ್ಯ ಹೆಗಡೆ, ನಯನಾ ಎಸ್‌. ಹೆಗಡೆ, ಚೇತನ್‌ ಹೆಗಡೆ, ಅಭಿನವ್‌ ಹೆಗಡೆ ಉಪಸ್ಥಿತರಿದ್ದರು.