ಉಡುಪಿ: ಶ್ರೀಕೃಷ್ಣಮಠದ ರಾಜಾಂಗಣದ ಜನಾರ್ದನತೀರ್ಥ ವೇದಿಕೆಯಲ್ಲಿ ಪರ್ಯಾಯ ಶ್ರೀಕೃಷ್ಣಾಪುರ ಮಠದ ಆಶ್ರಯದಲ್ಲಿ, ಸಾಂಸ್ಕೃತಿಕ ಕಾರ್ಯಕ್ರಮಗಳ ಅಂಗವಾಗಿ ರಾಧಾಕೃಷ್ಣ ನೃತ್ಯನಿಕೇತನ ಉಡುಪಿ ವತಿಯಿಂದ “ಭರತಮುನಿ ಜಯಂತ್ಯುತ್ಸವ” ವನ್ನು ಪರ್ಯಾಯ ಕೃಷ್ಣಾಪುರ ಮಠಾಧೀಶರಾದ ಶ್ರೀವಿದ್ಯಾಸಾಗರತೀರ್ಥ ಶ್ರೀಪಾದರು ಉದ್ಘಾಟಿಸಿದರು.
ಕನ್ನಡ ಉಪನ್ಯಾಸಕ ಮತ್ತು ಲೇಖಕ ರವಿಚಂದ್ರ ಬಾಯಾರಿ ಕೊಕ್ಕರ್ಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಅಭ್ಯಾಗತರಾಗಿ ಕಿರುತೆರೆ ಕಲಾವಿದರಾದ ಕಾರ್ತಿಕ್ ಸಾಮಗ ಭಾಗವಹಿಸಿದ್ದರು.
ವಿದುಷಿ ಶುಭದಾ ಸುಧೀರ್, ವಿದುಷಿ ಡಾ.ಸುಪರ್ಣಾ ವೆಂಕಟೇಶ್, ವಿದುಷಿ ಡಾ.ಚೇತನ ಆಚಾರ್ಯ, ವಿದುಷಿ ಉಮಾಶಂಕರಿ,ವಿದುಷಿ ಜಗನ್ನಾಥ ಆಚಾರ್ಯ ಎಳ್ಳಂಪಳ್ಳಿ ಇವರಿಗೆ ಭರತ ಪ್ರಶಸ್ತಿಯನ್ನಿತ್ತು ಗೌರವಿಸಲಾಯಿತು. ಸಂಗೀತ ಮತ್ತು ನೃತ್ಯ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಇತರರಿಗೆ ಕಲಾರ್ಪಣಾ ಪ್ರಶಸ್ತಿ, ನೃತ್ಯಾರಾಧನಾ ಪ್ರಶಸ್ತಿ, ಗುರು ರಾಧಾಕೃಷ್ಣಾನುಗ್ರಹ ಪ್ರಶಸ್ತಿಗಳನ್ನಿತ್ತು ಗೌರವಿಸಲಾಯಿತು.
ಸಂಸ್ಥೆಯ ವಿದ್ಯಾರ್ಥಿಗಳಿಂದ ಭರತನಾಟ್ಯ, ಕೂಚುಪುಡಿ, ನೃತ್ಯರೂಪಕ ನಡೆಯಿತು. ಸಂಚಾಲಕರಾದ ಬಿ.ಮುರಳೀಧರ ಸಾಮಗ, ನೃತ್ಯಗುರು ವಿದುಷಿ ವೀಣಾ ಎಂ.ಸಾಮಗ ಹಾಗೂ ಸಂಗೀತಗುರು ಪ್ರೇಮ ಆರ್.ತಂತ್ರಿ ಭಾಗವಹಿಸಿದ್ದರು.