ಸೆಲೆಬ್ರಿಟಿಗಳೂ ಕೂಡ ಆರೋಗ್ಯಕ್ಕಾಗಿ ಈ ಹಣ್ಣಿನ ಜ್ಯೂಸ್  ತಪ್ಪದೇ ಕುಡಿತಾರೆ: ನೀವೂ ಮಿಸ್ ಮಾಡದೇ ಕುಡೀರಿ ಯಾಕಂದ್ರೆ!

ಬೆಳಿಗ್ಗೆ ಎದ್ದ ತಕ್ಷಣ ಒಂದು ಗ್ಲಾಸ್ ಹಣ್ಣಿನ ರಸ ಕುಡಿಯುವುದು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದರಿಂದ ದೇಹಕ್ಕೆ ಬೇಕಾದ ಪೌಷ್ಟಿಕಾಂಶಗಳು ದೊರೆಯುತ್ತವೆ ಮತ್ತು ದಿನವಿಡೀ ಶಕ್ತಿಯಿಂದ ಇರಲು ಸಹಾಯ ಮಾಡುತ್ತದೆ. ಹಣ್ಣಿನ ರಸಗಳಲ್ಲಿ ಎಳನೀರು ಮತ್ತು ದಾಳಿಂಬೆ ಬೀಜದ ರಸ ತುಂಬಾ ಉಪಯುಕ್ತ ಎಂದು ತಜ್ಞರು ಹೇಳುತ್ತಾರೆ.

ಯಾವ ಜ್ಯೂಸ್:ಇದು ದಾಳಿಂಬೆ ಮತ್ತ ಎಳನೀರಿನ ಮಿಕ್ಸ್ ಜ್ಯೂಸ್. ಇದನ್ನು ತಯಾರಿಸಲು ಒಂದು ತೆಂಗಿನ ಎಳನೀರು, ಒಂದು ಹಿಡಿ ದಾಳಿಂಬೆ ಬೀಜಗಳು ಮತ್ತು ಸ್ವಲ್ಪ ಪಾಮ್ ಸಕ್ಕರೆ ಅಥವಾ ಬೆಲ್ಲ ಬೇಕಾಗುತ್ತದೆ. ಮೊದಲು ದಾಳಿಂಬೆ ಬೀಜಗಳನ್ನು ಮಿಕ್ಸಿಯಲ್ಲಿ ಚೆನ್ನಾಗಿ ಮಿಶ್ರಣ ಮಾಡಿ. ನಂತರ ಅದಕ್ಕೆ ಎಳನೀರು ಮತ್ತು ತೆಂಗಿನ ತಿರುಳನ್ನು ಸೇರಿಸಿ. ರುಚಿಗೆ ಬೆಲ್ಲ ಅಥವಾ ಪಾಮ್ ಸಕ್ಕರೆ ಹಾಕಿ ಮತ್ತೆ ಮಿಶ್ರಣ ಮಾಡಿ. ನಂತರ ಫಿಲ್ಟರ್ ಮಾಡಿ ತಂಪಾಗಿ ಬಡಿಸಿ.

ಏನಿದರ ಉಪಯೋಗ?

ದಾಳಿಂಬೆ ಮತ್ತು ಎಳನೀರಿನ ಸಂಯೋಜನೆ ದೇಹಕ್ಕೆ ತಂಪು ನೀಡುತ್ತದೆ ಮತ್ತು ನಿರ್ಜಲೀಕರಣ ನಿವಾರಣೆಗೆ ಸಹಾಯ ಮಾಡುತ್ತದೆ. ಇದರಲ್ಲಿ ಪೊಟ್ಯಾಸಿಯಮ್ ಮತ್ತು ಇತರ ಎಲೆಕ್ಟ್ರೋಲೈಟ್‌ಗಳು ಹೆಚ್ಚಾಗಿ ಇರುತ್ತವೆ. ಆಯುರ್ವೇದ ಪ್ರಕಾರ, ಎಳನೀರು ಜೀರ್ಣಕ್ರಿಯೆ ಸುಧಾರಿಸಲು ಮತ್ತು ಮೂತ್ರ ಮಾರ್ಗ ಶುದ್ಧೀಕರಣಕ್ಕೆ ಸಹಾಯ ಮಾಡುತ್ತದೆ. ಮೂತ್ರದ ಕಲ್ಲು, ಅಜೀರ್ಣ ಮತ್ತು ಶಾಖದಿಂದ ಉಂಟಾಗುವ ಚರ್ಮದ ಸಮಸ್ಯೆಗಳಿಗೆ ಇದು ಉಪಯುಕ್ತ.

ದಾಳಿಂಬೆ ಹಾಕೋದ್ರಿಂದ ಏನು ಪ್ರಯೋಜನ?

ದಾಳಿಂಬೆ ಹೃದಯಕ್ಕೆ ತುಂಬಾ ಒಳ್ಳೆಯ ಹಣ್ಣು. ಇದು ರಕ್ತದೊತ್ತಡ ಮತ್ತು ಕೊಲೆಸ್ಟ್ರಾಲ್ ನಿಯಂತ್ರಿಸಲು ಸಹಾಯ ಮಾಡುತ್ತದೆ. ದೇಹದಲ್ಲಿನ ವಿಷಕಾರಿ ಅಂಶಗಳನ್ನು ತೆಗೆಯುವ ಆಂಟಿ-ಆಕ್ಸಿಡೆಂಟ್‌ಗಳು ಇದರಲ್ಲಿ ಹೆಚ್ಚಾಗಿ ಇರುತ್ತವೆ. ದಾಳಿಂಬೆ ರಸ ಚರ್ಮಕ್ಕೆ ಕಾಂತಿ ನೀಡುತ್ತದೆ ಮತ್ತು ರಕ್ತ ಶುದ್ಧೀಕರಣಕ್ಕೂ ಸಹಾಯಕ.

100 ಗ್ರಾಂ ದಾಳಿಂಬೆಯಲ್ಲಿ ನೀರು, ಪ್ರೋಟೀನ್, ಫೈಬರ್, ಕ್ಯಾಲ್ಸಿಯಂ ಮತ್ತು ಮೆಗ್ನೀಸಿಯಂ ಸೇರಿದಂತೆ ಹಲವಾರು ಪೋಷಕಾಂಶಗಳಿವೆ. ಎಳನೀರು ಮತ್ತು ದಾಳಿಂಬೆ ರಸವನ್ನು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯುವುದು ದೇಹಕ್ಕೆ ತುಂಬಾ ಆರೋಗ್ಯಕರ. ಇದು ಹೃದಯ, ಚರ್ಮ ಮತ್ತು ಜೀರ್ಣಕ್ರಿಯೆಗೆ ಒಳ್ಳೆಯದಾಗಿದ್ದು, ದಿನವನ್ನು ಶಕ್ತಿಯುತವಾಗಿ ಆರಂಭಿಸಲು ಸಹಾಯ ಮಾಡುತ್ತದೆ.