ಈ ವೀಕೆಂಡ್ ನಲ್ಲಿ ನಿಮಗೆ ಅದ್ಬುತ ಮನರಂಜನೆ ಕೊಡಲು ಒಟಿಟಿಗೆ ಬಂದಿವೆ ಕನ್ನಡದ ಈ ಮೂರು ಸಿನಿಮಾಗಳು:

ಕನ್ನಡದಲ್ಲಿ ಕೆಲವೊಮ್ಮೆ ಒಳ್ಳೆಯ ಸಿನಿಮಾಗಳು ಬಂದರೂ ಸರಿಯಾದ ಥಿಯೇಟರ್ ಮತ್ತು ಪ್ರೇಕ್ಷಕರು ಸಿಗದೇ ಸೋಲುತ್ತದೆ. ಆದರೆ ಓಟಿಟಿಯಲ್ಲಿ ರಿಲೀಸ್ ಆದ ಮೇಲೆ ಪ್ರೇಕ್ಷಕರು ಅಂತಹ ಸಿನಿಮಾಗಳನ್ನು ಹೊಗಳುವ ಸನ್ನಿವೇಶ ಕೂಡ ಇದೆ. ಅಂತದ್ದೇ ಒಳ್ಳೆಯ ಕನ್ನಡ ಸಿನಿಮಾಗಳು ಒಟಿಟಿಗೆ ಬಂದಿವೆ.

ಒಟ್ಟು ಮೂರು ಹೀರೋಗಳನ್ನ ಒಳಗೊಂಡಿರುವ ಒಂದೊಳ್ಳೆ ಕತೆಯ ಹೂರಣ ಹೊಂದಿರುವ ಫಾರೆಸ್ಟ್ ಸಿನಿಮಾ ಇದೀಗ ಒಟಿಟಿಗೆ ಬಂದಿದ್ದುಚಿಕ್ಕಣ್ಣ ಈ ಸಿನಿಮಾದಲ್ಲಿ ಹೀರೋ ಆಗಿದ್ದಾರೆಫಸ್ಟ್‌ Rank ರಾಜು ಖ್ಯಾತಿಯ ಗುರುನಂದನ್ ಈ ಚಿತ್ರದಲ್ಲೂ ಹೀರೋ ಆಗಿದ್ದಾರೆ.

ಅಂದ ಹಾಗೆ ಥಿಯೇಟರ್ ನಲ್ಲಿ ರಿಲೀಸ್ ಆದಾಗ ಈ ಸಿನಿಮಾ 25 ದಿನ ಪೂರೈಸಿತ್ತು. ಚಿತ್ರತಂಡದ ಪ್ರಯತ್ನಕ್ಕೆ ಮೆಚ್ಚುಗೆ ವ್ಯಕ್ತವಾಗಿತ್ತು. ಆದರೆ ಬೇಸರವೆಂದರೆ ದೊಡ್ಡಮಟ್ಟದಲ್ಲಿ ಜನ ಸಿನಿಮಾ ನೋಡಿರಲಿಲ್ಲ. ಇದೀಗ ಸಿನಿಮಾ ಅಮೇಜಾನ್ ಪ್ರೈಂ ವೀಡಿಯೋದಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ. ವೀಕೆಂಡ್ ಮನೆಯಲ್ಲೇ ಕೂತು ಸಿನಿಮಾ ನೋಡಬಹುದು. ಫಾರೆಸ್ಟ್ ನಲ್ಲಿ ಕಳೆದುಹೋಗಬಹುದು.

ಇನ್ನೊಂದು ಒಳ್ಳೆಯ ಸಿನಿಮಾ ಅಂದ್ರೆ  ರುದ್ರ ಗುರು ಪುರಾಣ, ಈ ಚಿತ್ರದ ವಿಷಯ ಚೆನ್ನಾಗಿದೆ. ನಿರೂಪಣೆ ಕೂಡ ಥ್ರಿಲ್ಲಿಂಗ್ ಆಗಿಯೇ ಇದೆ. 25 ವರ್ಷದ ಹಿಂದೆ ಕಳೆದು ಹೋದ ಬಸ್ ವಾಪಾಸ್ ಬರೋದೇ ಈ ಕಥೆಯ ಪ್ರಮುಖ ಸೆಳೆತವಂತೆ, ಈ ಸಿನಿಮಾದಲ್ಲಿನಟ ರಿಷಿ ಇಲ್ಲಿ ಪೊಲೀಸ್ ಆಫೀಸರ್ ಆಗಿ ಅಭಿನಯಿಸಿದ್ದಾರೆ. ಡೈರೆಕ್ಟರ್ ನಂದೀಶ್ ಈ ಚಿತ್ರದಲ್ಲಿ ಕತೆ ಹೇಳಿದ್ದಾರಂತೆ. ರಂಗಾಯಣ ರಘು, ಚಿಕ್ಕಣ್ಣ, ಅನಿಷ್, ಗುರುನಂದನ್, ಅರ್ಚನಾ ಕೊಟ್ಟಿಗೆ, ಶರಣ್ಯ ಶೆಟ್ಟಿ ಹೀಗೆ ಅನೇಕ ಕಲಾವಿದರು ಇಲ್ಲಿದ್ದಾರೆ.. ಚಂದ್ರ ಮೋಹನ್ ಈ ಚಿತ್ರವನ್ನ ಡೈರೆಕ್ಷನ್ ಮಾಡಿದ್ದಾರೆ. ಚಿತ್ರದ ಕಥೆ ಮತ್ತು ಚಿತ್ರಕಥೆಯನ್ನ ಚಂದ್ರ ಮೋಹನ್ ಹಾಗೂ ಶೌರ್ಯ ಸಾಗರ್ ಬರೆದಿದ್ದಾರೆ. ಇನ್ನೊಂದು ಒಳ್ಳೆಯ ಸಿನಿಮಾ ರಾಜವರ್ಧನ್ ಹಾಗೂ ರಿಹಾನಾ ನಟನೆಯ ಆಕ್ಷನ್ ಥ್ರಿಲ್ಲರ್ ‘ಹಿರಣ್ಯ’ . ಈ ಸಿನಿಮಾ ಕೂಡ ನಿಮಗೆ ಇಷ್ಟವಾಗಬಹುದು. ಥ್ರಿಲ್ಲಿಂಗ್ ದೃಶ್ಯಗಳನ್ನು ಒಳಗೊಂಡಿದೆ. ಈ ವೀಕೆಂಡ್ ನಲ್ಲಿ ಸಿನಿಮಾದ ಮಜ ಅನುಭವಿಸಲು ಈ ಮೂರು ಸಿನಿಮಾಗಳನ್ನು ನೀವು ನೋಡಬಹುದು.