ಮುಂಜಾನೆ ಕರಿಬೇವು ಎಲೆ ಜಗಿಯೋದ್ರಿಂದ ಇಷ್ಟೊಂದೆಲ್ಲಾ ಉಪಯೋಗಗಳಿವೆ!

ಕರಿಬೇವು ಎಲೆ ಬರೀ ಒಗ್ಗರಣೆಗಷ್ಟೇ ಬಳಸುವುದಿಲ್ಲ. ಈ ಎಲೆಯಿಂದ ಹತ್ತಾರು ಉಪಯೋಗಗಳಿವೆ. ತಿನ್ನುವುದಕ್ಕೆ ಸಪ್ಪೆ ಬೋರು ಅನ್ನಿಸಿದ್ರೂ ಈ ಎಲೆಗಳ ಗುಣಗಳಿಂದ ಆರೋಗ್ಯಕ್ಕೂ ಹತ್ತಾರು ಪೂರಕವಾದ ಅಂಶಗಳಿವೆ ಬನ್ನಿ ಹಾಗಾದ್ರೆ ಕರಿಬೇವಿನಿಂದ ಯಾವುದೆಲ್ಲಾ ಪ್ರಯೋಜನಗಳಿವೆ ಎಂದು ತಿಳಿದುಕೊಳ್ಳೋಣ.

ಕ್ರಮಬದ್ದವಾಗಿ ತಿಂದರೆ ತೂಕ ಕಳೆದುಕೊಳ್ತೀರಿ:

ಹೌದು ಕೊಬ್ಬಿನ ಜೀರ್ಣಕ್ರಿಯೆಯನ್ನು ಹೆಚ್ಚಿಸುವ ಮತ್ತು ಚಯಾಪಚಯವನ್ನು ಹೆಚ್ಚಿಸುವ ಸಾಮರ್ಥ್ಯ ಕರಿಬೇವಿಗಿದೆ. ಇದರಿಂದಾಗಿ ತೂಕವನ್ನು ಕಳೆದುಕೊಳ್ಳಲು ಸಹಾಯ ಮಾಡುತ್ತದೆ.ಬೊಜ್ಜು, ದೇಹದ ತೂಕ ಇಳಿಸಬೇಕು ಎನ್ನುವವರು ಖಂಡಿತ ಕರಿಬೇವನ್ನು ತಪ್ಪದೇ ದಿನನಿತ್ಯ ಬೆಳಗ್ಗೆ ತಿನ್ನಬಹುದು

ಚರ್ಮದ ಆರೋಗ್ಯಕ್ಕೂ ಸಹಕಾರಿ:

ಚರ್ಮದ ಸಮಸ್ಯೆ ಇತ್ತೀಚೆನ ದಿನಗಳಲ್ಲಿ ಬಹಳಷ್ಟು ಕಾಡುವ ಸಮಸ್ಯೆಗಳಲ್ಲೊಂದು ಚರ್ಮದ ಬಣ್ಣ ಬದಲಾವಣೆ, ತ್ವಚೆಯಲ್ಲಿ ವ್ಯತ್ಯಾಸ ಆಗುತ್ತಲೇ ಇರುತ್ತದೆ. ಚರ್ಮದ ಸ್ಥಿತಿಯನ್ನು ಹದ್ದುಬಸ್ತಿನಲ್ಲಿಟ್ಟುಕೊಳ್ಳಲು ಕರಿಬೇವು ಸಹಕಾರಿ. ಕರಿಬೇವಿನ ರಸ ಅಥವಾ ಹಾಗೇ ಕರಿಬೇವು ಜಗಿಯುದರಿಂದ ಚರ್ಮಕ್ಕೂ ಒಳ್ಳೆಯದು.

ಜೀರ್ಣಕ್ರಿಯೆಗೆ ಉತ್ತೇಜನ ಕೂದಲಿನ ಗುಣಮಟ್ಟಕ್ಕೆ ಸಹಾಯ

ಕರಿಬೇವಿನಲ್ಲಿ ಫೈಬರ್ ಅಂಶ ಹೆಚ್ಚಿದೆ.ಇದು ಕರುಳಿನ ಚಲನೆಗೆ ಸಹಕಾರಿ. ಜೀರ್ಣಕ್ರಿಯೆ, ಮಲಬದ್ದತೆ ಸಮಸ್ಯೆಗೆ ರಾಮಬಾಣ.

ಇನ್ನು ಕೂದಲಿನ ವಿಷಯಕ್ಕೆ ಬಂದರೆ ಕೂದಲಿನ ಗುಣಮಟ್ಟವನ್ನು ಕಾಪಾಡುವಲ್ಲಿ ಕರಿಬೇವಿನ ಸಹಾಯ ತುಂಬಾನೇ ಇದೆ. ಕರಿಬೇವಿನ ಎಣ್ಣೆ ಮಾಡಿ ಕೂದಲಿಗೆ ಹಚ್ಚಬಹುದು. ದಪ್ಪ ಕೂದಲು ಬೆಳೆಯೋದಕ್ಕೂ ಇದು ಸಹಕಾರಿ. ಇನ್ನು ನಿಮ್ಮ ಮನೆಯಲ್ಲಿ ಕರಿಬೇವಿನ ಗಿಡ ಇದ್ದರೆ ಬೆಳಿಗ್ಗೆ ಪ್ರತಿದಿನ ಹತ್ತಾರು ಕರಿಬೇವಿನ ಎಲೆಗಳನ್ನು ಜಗಿಯುವ ಅಭ್ಯಾಸ ಮಾಡಿಕೊಳ್ಳಿ.