ಬೆಂಗಳೂರು ಪ್ರದೇಶವು ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (ಸಿ.ಬಿ.ಎಸ್.ಸಿ) XII ತರಗತಿಯ ಫಲಿತಾಂಶಗಳಲ್ಲಿ 98.16% ರಷ್ಟು ಪ್ರಾದೇಶಿಕವಾರು ಉತ್ತೀರ್ಣತೆಯೊಂದಿಗೆ ಎರಡನೇ ಸ್ಥಾನವನ್ನು ಪಡೆದುಕೊಂಡಿದೆ. ಸಿ.ಬಿ.ಎಸ್.ಸಿ ಬೋರ್ಡ್ ಶುಕ್ರವಾರ 12 ನೇ ತರಗತಿಯ ಫಲಿತಾಂಶಗಳನ್ನು ಪ್ರಕಟಿಸಿದ್ದು ಒಟ್ಟಾರೆ ಶೇಕಡಾ 92.71 ತೇರ್ಗಡೆ ಫಲಿತಾಂಶ ಬಂದಿದೆ.
ತಿರುವನಂತಪುರ ಪ್ರದೇಶವು 98.83% ಫಲಿತಾಂಶದೊಂದಿಗೆ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. 97.79% ಫಲಿತಾಂಶದೊಂದಿಗೆ ಬೆಂಗಳೂರು ಪ್ರದೇಶವು ಎರಡನೇ ಸ್ಥಾನದಲ್ಲಿದ್ದರೆ, ಚೆನ್ನೈ ಪ್ರದೇಶವು ಮೂರನೇ ಸ್ಥಾನದಲ್ಲಿದೆ.
ಶೇ.94.54ರಷ್ಟು ಬಾಲಕಿಯರು ಉತ್ತೀರ್ಣರಾಗಿದ್ದರೆ, ಶೇ.91.25ರಷ್ಟು ಬಾಲಕರು ಉತ್ತೀರ್ಣರಾಗಿದ್ದಾರೆ. ಇಲ್ಲೂ ಕೂಡಾ 3.29% ದೊಂದಿಗೆ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ. 100% ಫಲಿತಾಂಶದೊಂದಿಗೆ ಮಂಗಳಮುಖಿ ವಿದ್ಯಾರ್ಥಿಗಳು ಈ ಬಾರಿಯ ಫಲಿತಾಂಶದಲ್ಲಿ ಮಿಂಚಿದ್ದಾರೆ.
ರಾಷ್ಟ್ರದಾದ್ಯಂತ ಒಟ್ಟು 14,35,366 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 13,30,662 (92.7%) ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ಒಟ್ಟು 33,432 ವಿದ್ಯಾರ್ಥಿಗಳು ಅಥವಾ 2.2% ವಿದ್ಯಾರ್ಥಿಗಳು 95% ಕ್ಕಿಂತ ಹೆಚ್ಚು ಮತ್ತು 1,34,797 ಅಥವಾ 9.39% ಒವಿದ್ಯಾರ್ಥಿಗಳು 90% ಕ್ಕಿಂತ ಹೆಚ್ಚು ಅಂಕಗಳನ್ನು ಗಳಿಸಿದ್ದಾರೆ.