udupixpress
Home Trending ಬೆಂಗಳೂರು: ರಾಜ್ಯದಲ್ಲಿಂದು‌ 7 ಕೊರೊನಾ ಪಾಸಿಟಿವ್ ಪತ್ತೆ: ಓರ್ವ ಸಾವು

ಬೆಂಗಳೂರು: ರಾಜ್ಯದಲ್ಲಿಂದು‌ 7 ಕೊರೊನಾ ಪಾಸಿಟಿವ್ ಪತ್ತೆ: ಓರ್ವ ಸಾವು

ಬೆಂಗಳೂರು: ರಾಜ್ಯದಲ್ಲಿ ಮಂಗಳವಾರ ಹೊಸದಾಗಿ 7 ಕೊರೊನಾ ಸೋಂಕಿತರ ಪ್ರಕರಣಗಳು ಪತ್ತೆಯಾಗಿದ್ದು, ಹೀಗಾಗಿ ಒಟ್ಟು ಕೊರೊನಾ ಪೀಡಿತರ ಸಂಖ್ಯೆ 415 ಕ್ಕೆ ಏರಿಕೆಯಾಗಿದ್ದು, ಕಲಬುರ್ಗಿಯಲ್ಲಿ 80 ವರ್ಷದ ಓರ್ವ ವೃದ್ಧ ಕೊರೊನಾಗೆ ಬಲಿಯಾಗಿದ್ದಾರೆ.

ಕೊರೊನಾದಿಂದ ರಾಜ್ಯದಲ್ಲಿ‌ಒಟ್ಟು 17 ಜನರು ಸಾವನ್ನಪ್ಪಿದ್ದು, ಒಟ್ಟು 114 ಜನರು ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ಜಿಲ್ಲಾವಾರು ಸೋಂಕಿತರನ್ನು ಗಮನಿಸುವುದಾದದರೆ ಇಂದು ಪತ್ತೆಯಾದ 7 ಜನರಲ್ಲಿ ತಲಾ ಮೂವರು ವಿಜಯಪುರ ಹಾಗೂ ಕಲಬುರಗಿಯವರಾಗಿದ್ದಾರೆ. ಒಬ್ಬರು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪತ್ತೆಯಾಗಿದ್ದಾರೆ. ಇದರಲ್ಲಿ ಮೂವರು ಪುರುಷರು ಹಾಗೂ ನಾಲ್ವರು ಮಹಿಳೆಯರು ಸೇರಿದ್ದಾರೆ. ರಾಜಧಾನಿ ಬೆಂಗಳೂರಿನಲ್ಲಿ ಯಾವುದೇ ಪಾಸಿಟಿವ್ ಪತ್ತೆಯಾಗಿಲ್ಲ.

error: Content is protected !!