ಮಂಗಳೂರು: ಬೆಳ್ತಂಗಡಿಯ ನೆರೆಪೀಡಿತ ಪ್ರದೇಶಗಳಿಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಶನಿವಾರ ಭೇಟಿ ನೀಡಿದರು.
ಬೆಳ್ತಂಗಡಿಯ ಅನಾರ್ ಎಂಬ ಹಳ್ಳಿಗೆ ಬೇಟಿ ನೀಡಿ ನೆರೆಪೀಡಿತರಿಂದ ಅಹವಾಲು ಸ್ವೀಕರಿಸಿದರು.
ನೆರೆಗೆ ಕೊಚ್ಚಿ ಹೋಗಿರುವ ಕೃಷಿ ಭೂಮಿ, ಸೇತುವೆಗಳನ್ನು ವೀಕ್ಷಿಸಿದರು.
ಮಾಜಿ ಸಚಿವರಾದ ಯುಟಿ ಖಾದರ್, ಅಭಯಚಂದ್ರ ಜೈನ್, ಮಾಜಿ ಶಾಸಕ ವಸಂತ ಬಂಗೇರಾ ಉಪಸ್ಥಿತರಿದ್ದರು.
ಅಧಿಕಾರಿಗಳಿಗೆ ಕರೆ:
ನೆರೆ ಹಾನಿಗೆ ಒಳಗಾದ ಪ್ರದೇಶದಿಂದಲೇ ಸಿದ್ದರಾಮಯ್ಯ ದ.ಕ.ಜಿಲ್ಲಾಧಿಕಾರಿ, ತಹಶೀಲ್ದಾರ್ ಗೆ ಕರೆ ಮಾಡಿ ವಿಚಾರಿಸಿದರು.
ಸೂಕ್ತ ವಸತಿ, ಪರಿಹಾರಕ್ಕಾಗಿ ಸಿದ್ದರಾಮಯ್ಯ ಬಳಿ ನೆರೆಸಂತ್ರಸ್ತರು ಮನವಿ ಮಾಡಿದರು.