ಬೆಳ್ತಂಗಡಿ: ವಿದ್ಯಾಮಾತ ಫೌಂಡೇಶನ್ ಹಾಗೂ ಜಯ ಕರ್ನಾಟಕ ಸಂಘಟನೆಯ ಸಹಭಾಗಿತ್ವದಲ್ಲಿ ಜೂ. 9ರಂದು ಉಚಿತ ಪ್ರವೇಶದೊಂದಿಗೆ ಗ್ರಾಮೀಣ ಉದ್ಯೋಗ ಮೇಳ-2019 ಬೆಳ್ತಂಗಡಿ ಮಾದರಿ ಹಿರಿಯ ಪ್ರಥಮಿಕ ಶಾಲಾ ವಠಾರದಲ್ಲಿ ಜರಗಲಿದೆ ಎಂದು ವಿದ್ಯಾಮಾತ ಫೌಂಡೇಶನ್ ನ ಅಧ್ಯಕ್ಷ ಭಾಗ್ಯೇಶ್ ರೈ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಈ ಉದ್ಯೋಗ ಮೇಳದಲ್ಲಿ 7ನೇ ತರಗತಿಯಿಂದ ಎಸ್ಸೆಸ್ಸೆಲ್ಸಿ, ಪಿಯುಸಿ, ಡಿಪ್ಲೋಮ, ಐಟಿಐ, ಹಾಗೂ ವಿವಿಧ ಪದವಿ ಪಡೆದ ವಿದ್ಯಾರ್ಥಿಗಳು ಭಾಗವಹಿಸಬಹುದು. ಉದ್ಯೋಗ ಮೇಳವನ್ನು ಅಂದು ಬೆಳಿಗ್ಗೆ 9 ಗಂಟೆಗೆ ಶಾಸಕ ಹರೀಶ್ ಪೂಂಜ ಹಾಗೂ ಮಾಜಿ ಶಾಸಕ ಕೆ.ವಸಂತ ಬಂಗೇರ ಅವರು ಉದ್ಘಾಟಿಸಲಿದ್ದಾರೆ. ಸಂಜೆ 4 ಗಂಟೆಯವರೆಗೆ ನಡೆಯಲಿದೆ. ಚೆನ್ನೈ, ಬೆಂಗಳೂರು, ಮಂಗಳೂರು ಮೊದಲಾದ ಕಡೆಯಿಂದ 25ಕ್ಕೂ ಹೆಚ್ಚು ಕಂಪೆನಿಗಳು ಭಾಗವಹಿಸಲಿವೆ ಎಂದು ತಿಳಿಸಿದರು.
ಹೆಚ್ಚಿನ ಮಾಹಿತಿಗಾಗಿ [email protected] ಹಾಗೂ 888455592 ಅನ್ನು ಸಂಪರ್ಕಿಸಬಹುದು.
ಗೋಷ್ಠಿಯಲ್ಲಿ ಜಯ ಕರ್ನಾಟಕ ರಾಜ್ಯ ಉಪಾಧ್ಯಕ್ಷ ಸುರೇಂದ್ರ ಆಳ್ವ, ಪ್ರಮೋದ್ ಶೆಟ್ಟಿ, ಸಂಪತ್ ಕುಮಾರ್, ತುಳಸಿ ಉಪಸ್ಥಿತಿತರಿದ್ದರು.












