ಬೆಳ್ತಂಗಡಿ: ಸುಲ್ಕೇರಿಯಲ್ಲಿ ಕಾಣೆಯಾದ ಮಗುವಿನ ಮೃತದೇಹ ಹೊಳೆಯಲ್ಲಿ ಪತ್ತೆ

ಬೆಳ್ತಂಗಡಿ: ತಾಲೂಕಿನ‌ ಅಳದಂಗಡಿ ಸುಲ್ಕೇರಿ ಸಮೀಪ ಮನೆಯಂಗಳದಿಂದ ನಾಪತ್ತೆಯಾಗಿದ್ದ ಮಗುವಿನ ಶವ ಬುಧವಾರ ಮನೆ ಸಮೀಪದ ಹೊಳೆಯಲ್ಲಿ ಪತ್ತೆಯಾಗಿದೆ.

ಸಲ್ಕೇರಿ ಗ್ರಾಮದ ಜಂತಿಗೋಳಿ ಪರಾರಿ ನಿವಾಸಿ ಸಚಿತ್ರ-ಸುಭಾಷ್ ದಂಪತಿಯ ಮಗು ಎರಡೂವರೆ ವರ್ಷದ ದೃತ್ವಿ ಮಂಗಳವಾರ ಮನೆಯಂಗಳದಲ್ಲಿ ಆಟವಾಡುತ್ತಲೇ ಧಿಡೀರ್ ನಾಪತ್ತೆಯಾಗಿತ್ತು.

ಆ ಬಳಿಕ‌ ನಿನ್ನೆ ಮನೆ ಸುತ್ತಮುತ್ತ ಹಾಗೂ ಸಮೀಪದ ನದಿಯಲ್ಲಿ ಹುಡುಕಾಟ‌ ನಡೆಸಲಾಗಿತ್ತು. ಆದರೆ ಮಗು ಪತ್ತೆಯಾಗಿರಲಿಲ್ಲ.  ರಾತ್ರಿಯಾಗುತ್ತಲೇ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿತ್ತು. ಇಂದು ಬೆಳಿಗ್ಗೆ ಮತ್ತೆ ಹುಡುಕಾಟ ಪ್ರಾರಂಭಿಸಿದ್ದು ಈ ಸಂದರ್ಭ ಸಮೀಪದ ಹೊಳೆಯಲ್ಲಿ ಶವ ಪತ್ತೆಯಾಗಿದೆ.