ಮಾವಿನಕಟ್ಟೆ : ಕೆಸರುಗದ್ದೆ ಕ್ರೀಡಾಕೂಟ ಉದ್ಘಾಟನೆ.

ಬೆಳ್ಮಣ್ : ವಿಶ್ವ ಹಿಂದೂ ಪರಿಷತ್ ಭಜರಂಗದಳ ಮಾವಿನಕಟ್ಟೆ ಘಟಕ ಮತ್ತು ಬೆಳ್ಮಣ್ ವಲಯ ಆಶ್ರಯದಲ್ಲಿ ಮಾವಿನಕಟ್ಟೆ ಮನ್‍ಬೆಟ್ಟು ಗದ್ದೆಯಲ್ಲಿ ಕೆಸರುಗದ್ದೆ ಗ್ರಾಮೀಣ ಕ್ರೀಡಾಕೂಟ ಭಾನುವಾರ ಜರುಗಿತು.
ಕ್ರೀಡಾಕೂಟವನ್ನು ನಂದಳಿಕೆ ಲಕ್ಷ್ಮೀ ಜನಾರ್ಧನ ದೇವಸ್ಥಾನದ ಆಡಳಿತ ಮೊಕ್ತೇಸರ ತುಕಾರಾಮ್ ಶೆಟ್ಟಿ ಉದ್ಘಾಟಿಸಿದರು. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಮುಖರಾದ ಶಿವಪ್ರಸಾದ್  ಪ್ರಮುಖ ಭಾಷಣ ಮಾಡಿದರು.


ವಿಶ್ವಹಿಂದೂ ಪರಿಷತ್ ಬೆಳ್ಮಣ್ ವಲಯದ ಅಧ್ಯಕ್ಷ ಪ್ರಸಾದ್ ಶೆಟ್ಟಿ ಕಾಡಿಕಂಬಳ  ಅಧ್ಯಕ್ಷತೆಯಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮುಂಡ್ಕೂರು ಗ್ರಾ.ಪಂ ಉಪಾಧ್ಯಕ್ಷ ರವೀಂದ್ರ ಶೆಟ್ಟಿ , ಉದ್ಯಮಿ ದಿವಾಕರ್ ಶೆಟ್ಟಿ, ವಿಹಿಂಪ ಬೆಳ್ಮಣ್ ವಲಯದ ಗೌರವಾಧ್ಯಕ್ಷ ನಿತ್ಯಾನಂದ ಶೆಟ್ಟಿ, ಭಜರಂಗದಳ ಗೋರಕ್ಷಾ ಪ್ರಮುಖರಾದ ಸೂರಾಜ್ ಕುಮಾರ್, ಮಹಮ್ಮಾಯಿಯುವಕ ಮಂಡಲದ ಅಧ್ಯಕ್ಷ ಸಂದೀಪ್ ಆಚಾರ್ಯ, ಮಾವಿನಕಟ್ಟೆ ಘಟಕ ಸಂಚಾಲಕ ಸಂತೋಷ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

ಬಳಿಕ ಕೆಸರು ಗದ್ದೆಯಲ್ಲಿ ವಿವಿದ ರೀತಿಯ ಗ್ರಾಮೀಣ ಕ್ರೀಡಾ ಕೂಟಗಳು ನಡೆಯಿತು.