ಬೆಳಪುವಿನ ಹಲವಾರು ಕಡೆ ಕ್ರಿಕೆಟ್ ಪಂದ್ಯಾಟದಲ್ಲಿ ಪ್ರಶಸ್ತಿ ಪಡೆದ ಬೆಳಪು ಫ್ರೆಂಡ್ಸ್ ಕ್ಲಬ್ ವತಿಯಿಂದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬೆಳಪು ಇಲ್ಲಿಯ ಆಟದ ಮೈದಾನದಲ್ಲಿ ವಾರ್ಷಿಕ ಕ್ರಿಕೆಟ್ ಪಂದ್ಯಕೂಟದ ಉದ್ಘಾಟನೆಯನ್ನು ಸಮಾಜ ಸೇವಕ ಜನ ಸಂಪರ್ಕ ಜನಸೇವ ವೇದಿಕೆ ಕಾಪು ಇದರ ಅಧ್ಯಕ್ಷರಾದ ಮಲ್ಲಾರು ದಾಬ ನಿವಾಸ ದಿವಾಕರ ಬಿ ಶೆಟ್ಟಿ ಇವರು ಉದ್ಘಾಟಿಸಿದರು.
ಬೆಳಪು ಜಾಮಿಯಾ ಮಸೀದಿ ಇದರ ಧರ್ಮ ಗುರುಗಳಾದ ಖಯಿಮ್ ಸಾಹೇಬ್ ಆಶೀರ್ವಚನ ನೀಡಿ ಮಾತನಾಡಿ ಬೆಳಪುವಿನ ಉತ್ಸಾಹಿ ಯುವಕರು ಸೇರಿಕೊಂಡು ಮಾಡುವ ಸಮಾಜ ಸೇವಾ ಮುಖ ಕೆಲಸ ಹಾಗೂ ಕ್ರೀಡೆಗೆ ತುಂಬಾ ಪ್ರೋತ್ಸಾಹ ನೀಡಿ ವರ್ಷಂಪ್ರತಿ ಮಾಡುವ ಕ್ರೀಡಾಪಂದ್ಯಕೂಟಕ್ಕೆ ದೇವರು ಒಳ್ಳೆಯದನ್ನು ಅನುಗ್ರಹಿಸಲಿ ಇನ್ನಷ್ಟು ಹೆಚ್ಚು ರಾಷ್ಟ್ರಮಟ್ಟದಲ್ಲಿ ಇಲ್ಲಿಯ ಯುವಕರು ಮಿಂಚಲಿ ಎಂದು ಶುಭ ಹಾರೈಸಿ ಆಶೀರ್ವದಿಸಿದರು.

ಬೆಳಪು ಬಬ್ಬುಸ್ವಾಮಿ ದೇವಸ್ಥಾನದ ಪ್ರಧಾನ ಅರ್ಚಕ ಜಯ ಎo ಬೆಳಪು, ಫ್ರೆಂಡ್ಸ್ ಕ್ಲಬ್ ಬೆಳಪು ಇದರ ಅಧ್ಯಕ್ಷ ಸಂತೋಷ್ ಕುಮಾರ್ ಬೆಳಪು ,ಉಪಾಧ್ಯಕ್ಷ ವಸಂತ ಡಿ ಪೂಜಾರಿ ಬೆಳಪು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಮಾಜ ಸೇವೆಯಲ್ಲಿ ಹಲವಾರು ರಾಷ್ಟ್ರೀಯ ರಾಜ್ಯಪ್ರಶಸ್ತಿ ಪಡೆದ ಸಮಾಜ ಸೇವಕ ಮಲ್ಲರು ದಾಬ ನಿವಾಸ ದಿವಾಕರ ಬಿ ಶೆಟ್ಟಿ ರಾಷ್ಟ್ರೀಯ ಮಟ್ಟದಲ್ಲಿ ಕ್ರಿಕೆಟ್ ಪಂದ್ಯಾಟದಲ್ಲಿ ಗುರುತಿಸಿಕೊಂಡ ಸಂದೇಶ್, ರಾಷ್ಟ್ರೀಯ ಮಟ್ಟದಲ್ಲಿ ತ್ರೋಬಲ್ ಕ್ಷೇತ್ರದಲ್ಲಿ ಗುರುತಿಸಿಕೊಂಡ ಯಾಸಿನ್ ಬೆಳಪು ಇವರನ್ನು ಗಣ್ಯರ ಸಮ್ಮುಖದಲ್ಲಿ ಸನ್ಮಾನಿಸಲಾಯಿತು. ಪಂದ್ಯ ಕೂಟದ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಯಾಸಿನ್ ಕಾರ್ಯಕ್ರಮ ನಿರ್ವಹಿಸಿ ಧನ್ಯವಾದವಿತ್ತರು.













