ಭುವನೇಶ್ವರ: ಭಾರತದಲ್ಲಿ ಸಂಶೋಧಿಸಲ್ಪಟ್ಟ ಕೊರೊನಾ ಲಸಿಕೆ ಕೋವ್ಯಾಕ್ಸಿನ್ ಇದೀಗ ಮಾನವ ಪ್ರಯೋಗ ಆರಂಭವಾಗಿದೆ. ಭುವನೇಶ್ವರದ ವೈದ್ಯಕೀಯ ವಿಜ್ಞಾನ ಸಂಸ್ಥೆ ಮತ್ತು ಎಸ್ಯುಎಂ ಆಸ್ಪತ್ರೆಯಲ್ಲಿ ಈ ಲಸಿಕೆಯ ಮಾನವ ಪ್ರಯೋಗ ನಡೆಯುತ್ತಿದೆ. ಇದು ICMR ಆಯ್ಕೆ ಮಾಡಿದ 12 ಕೇಂದ್ರಗಳಲ್ಲಿ ಒಂದಾಗಿದೆ.
ಭುವನೇಶ್ವರ ಹೊರತುಪಡಿಸಿ ಕ್ಲಿನಿಕಲ್ ಪ್ರಯೋಗಕ್ಕೆ ಆಯ್ಕೆಯಾದ ಇತರ ಸಂಸ್ಥೆಗಳಾಗಿ ವಿಶಾಖಪಟ್ಟಣಂ, ರೋಹ್ಟಕ್, ನವದೆಹಲಿ, ಪಾಟ್ನಾ, ಬೆಳಗಾವಿ, ನಾಗ್ಪುರ, ಗೋರಖ್ಪುರ, ಕಟ್ಟಂಕುಲಥೂರ್, ಹೈದರಾಬಾದ್, ಆರ್ಯ ನಗರ, ಕಾನ್ಪುರ್ ಮತ್ತು ಗೋವಾ ಆಯ್ಕೆಯಾಗಿದೆ.
ಕೊವಾಕ್ಸಿನ್ ಮಾನವ ಪ್ರಯೋಗದ 1 ಹಂತದ ಮೊದಲ ಭಾಗವು ರೋಹ್ಟಕ್ ನ ವೈದ್ಯಕೀಯ ವಿಜ್ಞಾನದ ಸ್ನಾತಕೋತ್ತರ ಸಂಸ್ಥೆಯಲ್ಲಿ (ಪಿಜಿಐ) ಶನಿವಾರ ಪೂರ್ಣಗೊಂಡಿದೆ ಎಂದು ಲಸಿಕೆ ಪ್ರಯೋಗ ತಂಡದ ಪ್ರಧಾನ ತನಿಖಾಧಿಕಾರಿ ಡಾ.ಸವಿತಾ ವರ್ಮಾ ಹೇಳಿದ್ದಾರೆ.
ಲಸಿಕೆ ಪ್ರಯೋಗದ ಮೊದಲ ಹಂತದ (ಕೊವಾಕ್ಸಿನ್) ಪೂರ್ಣಗೊಂಡಿದೆ. ಭಾರತದಾದ್ಯಂತ 50 ಜನರಿಗೆ ಲಸಿಕೆ ನೀಡಲಾಯಿತು ಮತ್ತು ಫಲಿತಾಂಶಗಳು ಉತ್ತೇಜನಕಾರಿಯಾಗಿದೆ. ಮೊದಲೇ ಹಂತದ ಎರಡನೇ ಭಾಗದಲ್ಲಿ ಆರು ಜನರಿಗೆ ಶನಿವಾರ ಲಸಿಕೆ ನೀಡಲಾಯಿತು ಎಂದು ಅವರು ತಿಳಿಸಿದರು.